ಪರಸ್ಪರ ಕೂದಲಿಡಿದು ಬಡಿದಾಡಿಕೊಂಡ ಹುಡುಗಿಯರು‌ | Viral Video

ಮಧ್ಯಪ್ರದೇಶದ ಮೊರೆನಾದಲ್ಲಿರುವ ಸ್ಥಳೀಯ ಕೋಚಿಂಗ್ ಸೆಂಟರ್‌ ಬಳಿ ಶನಿವಾರದಂದು ಇಬ್ಬರು ಹುಡುಗಿಯರು ಪರಸ್ಪರ ಕೂದಲಿಡಿದುಕೊಂಡು ಹೊಡೆದಾಡುಕೊಳ್ಳುತ್ತಿರುವುದನ್ನು ತೋರಿಸುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದು, ಫುಲ್‌ ವೈರಲ್‌ ಆಗಿದೆ.

ವೀಡಿಯೋದಲ್ಲಿ ಇಬ್ಬರು ವಿದ್ಯಾರ್ಥಿನಿಯರು ಪರಸ್ಪರ ಕೂದಲು ಹಿಡಿದುಕೊಂಡು ಒದೆಯುತ್ತಿರುವುದನ್ನು ಕಾಣಬಹುದು. ಈ ವೇಳೆ ವ್ಯಕ್ತಿಯೊಬ್ಬ ಮಧ್ಯಪ್ರವೇಶಿಸಿ ಅವರನ್ನು ಬೇರ್ಪಡಿಸುವವರೆಗೂ ಹೋರಾಟ ಮುಂದುವರೆದಿದ್ದು, ವ್ಯಕ್ತಿ ಜಗಳ ಬಿಡಿಸಿದ ಬಳಿಕ ಪರಿಸ್ಥಿತಿ ತಹಬದಿಗೆ ಬಂದಿದೆ.

ಮಾಹಿತಿಯ ಪ್ರಕಾರ, ಈ ಇಬ್ಬರು ವಿದ್ಯಾರ್ಥಿನಿಯರ ನಡುವೆ ಹಲವು ದಿನಗಳಿಂದ ಜಗಳ ನಡೆಯುತ್ತಿದ್ದು, ಶನಿವಾರ ಇದು ವಿಕೋಪಕ್ಕೆ ತಿರುಗಿ ಪರಿಸ್ಥಿತಿ ಬಿಗಡಾಯಿಸಿದೆ.

ಈ  ಜಗಳ ಆರಂಭವಾದ ಮೊದಲಿಗೆ ಹಲವು ನೋಡುಗರು, ಇಬ್ಬರನ್ನೂ ಬಿಡಿಸುವ ಬದಲು, ವಿದ್ಯಾರ್ಥಿನಿಯರನ್ನು ಮತ್ತಷ್ಟು ಪ್ರೋತ್ಸಾಹಿಸಿದರಲ್ಲದೇ ವೀಡಿಯೊ ರೆಕಾರ್ಡ್ ಮಾಡಿದ್ದಾರೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ವಿದ್ಯಾರ್ಥಿನಿಯರ ಕೋಪ ಎಷ್ಟರ ಮಟ್ಟಿಗೆ ತೀವ್ರವಾಗಿತ್ತು ಎಂದರೆ ಅವರುಗಳಿಗೆ ತಮ್ಮ ಸುರಕ್ಷತೆ ಅಥವಾ ಸುತ್ತಮುತ್ತಲಿನವರ ಕುರಿತು ಅರಿವೇ ಇರಲಿಲ್ಲ.

ವಿಡಿಯೋ ವೈರಲ್‌ ಆದ ಬಳಿಕ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ನಡೆಸಿ, ಅದನ್ನು ಚಿತ್ರೀಕರಿಸಿದ ಮತ್ತು ಹಂಚಿಕೊಳ್ಳುವ ಮೂಲಕ ಜಗಳಕ್ಕೆ ಪ್ರೋತ್ಸಾಹಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read