ಉಡುಪಿ: ಕಾರ್ಕಳದ ಬಂಜಾರ್ ಬಾರ್ ನಲ್ಲಿ ಪರವಾನಿಗೆ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಏಪ್ರಿಲ್ 4ರಂದು ಬೆಳಗ್ಗೆ ಬಾರ್ ತೆರೆದು ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿರುವ ಮಾಹಿತಿ ಆಧರಿಸಿ ಕಾರ್ಕಳ ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ ಡಿ.ಆರ್. ದಾಳಿ ನಡೆಸಿದ್ದಾರೆ. 16,430 ರೂಪಾಯಿ ಮೌಲ್ಯದ ವಿವಿಧ ಮಾದರಿಯ ಮದ್ಯ ಹಾಗೂ 2140 ರೂ. ನಗದು ವಶಕ್ಕೆ ಪಡೆಯಲಾಗಿದೆ.
ಹೆಚ್ಚಿನ ಲಾಭಕ್ಕಾಗಿ ಬೆಳಿಗ್ಗೆ ಬಾರ್ ತೆರೆದು ಮದ್ಯ ಮಾರಾಟ ಮಾಡುತ್ತಿದ್ದ ವ್ಯವಸ್ಥಾಪಕ ಸುನಿಲ್ ಮತ್ತು ವಿನಿತ್ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.