ಗುರುವಾರ ಕೇರಳದ ಪಣಪುಳದಲ್ಲಿ ಹೆಬ್ಬಾವನ್ನು ಕೊಂದು ಅದರ ಮಾಂಸವನ್ನು ಬೇಯಿಸಿದ ಆರೋಪದ ಮೇಲೆ ಅರಣ್ಯ ಅಧಿಕಾರಿಗಳು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಾದ ಪ್ರಮೋದ್ ಮತ್ತು ಬಿನೀಶ್ ಇಬ್ಬರೂ ಸ್ಥಳೀಯರು ಬುಧವಾರ ಸಂಜೆ ತಮ್ಮ ಮನೆಗಳ ಸಮೀಪದ ರಬ್ಬರ್ ತೋಟದಿಂದ ಹೆಬ್ಬಾವನ್ನು ಬೇಟೆಯಾಡಿ, ನಂತರ ಕೊಂದು ಪ್ರಮೋದ್ ಅವರ ಮನೆಯಲ್ಲಿ ಹೆಬ್ಬಾವಿನ ಕರಿ ತಯಾರಿಸಿದರು.
ಖಚಿತ ಮಾಹಿತಿ ಮೇರೆಗೆ ಥಳಿಪರಂಬ ರೇಂಜ್ ಆಫೀಸರ್ ಸುರೇಶ್ ಪಿ ಮತ್ತು ಅವರ ತಂಡವು ಮನೆಯ ಮೇಲೆ ದಾಳಿ ನಡೆಸಿ, ಹಾವಿನ ಭಾಗಗಳು ಮತ್ತು ಬೇಯಿಸಿದ ಖಾದ್ಯವನ್ನು ವಶಪಡಿಸಿಕೊಂಡಿದೆ. “ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
You Might Also Like
TAGGED:ಹೆಬ್ಬಾವು