ಸ್ನೇಹಿತನ ಮೃತದೇಹ ಎಸೆಯುವಾಗ ಆಯತಪ್ಪಿ ಬಿದ್ದು ಸತ್ತ ಆರೋಪಿ…!

ಕೊಲ್ಹಾಪುರ: ಹಣಕಾಸಿನ ವಿವಾದಕ್ಕೆ ಸಂಬಂಧಿಸಿದಂತೆ ಸ್ನೇಹಿತನನ್ನು ಕೊಲೆ ಮಾಡಿದ ಯುವಕನೊಬ್ಬ ಆತನ ಮೃತದೇಹವನ್ನು ಬೆಟ್ಟದಿಂದ ಕೆಳಕ್ಕೆ ತಳ್ಳುವ ಸಮಯದಲ್ಲಿ ಆಯತಪ್ಪಿ ಬಿದ್ದು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಕೊಲ್ಹಾಪುರದಿಂದ ಸಾವಂತವಾಡಿಗೆ ಹೋಗುವ ಮಾರ್ಗದಲ್ಲಿರುವ ಅಂಬೋಲಿ ಘಾಟ್  ನಲ್ಲಿ ಈ ಘಟನೆ ನಡೆದಿದ್ದು, ಯುವಕನ ಶವವನ್ನು ಎಸೆಯಲು ಪ್ರಯತ್ನಿಸಿದ್ದ ಇನ್ನೊಬ್ಬ ಕೂದಲೆಳೆ ಅಂತರದಿಂದ ಪವಾಡಸದೃಶವಾಗಿ ಬಚಾವ್​ ಆಗಿದ್ದಾನೆ.

ಭೌಸೋ ಮಾನೆ ಎಂಬಾತ ಸುಶಾಂತ್ ಕಿಲರೆ (30) ಎಂಬಾತನ ಕೊಲೆ ಮಾಡಿ ಈಗ ತಾನೂ ಸತ್ತಿದ್ದಾನೆ. ಪವಾರ್​ ಎಂಬಾತ ಪವಾಡಸದೃಶವಾಗಿ ಬದುಕಿದ್ದಾನೆ. ಮೂವರೂ ಸತಾರಾದ ಕರಡ್ ನಿವಾಸಿಗಳು. ಮೃತ ದೇಹವನ್ನು ಬೆಟ್ಟದ ಇಳಿಜಾರಿನಲ್ಲಿ ಎಸೆಯುವಾಗ ಮಾನೆ ಸಮತೋಲನ ಕಳೆದುಕೊಂಡು ಬಿದ್ದಿರುವುದಾಗಿ ಪವಾರ್​ ಹೇಳಿದ್ದಾನೆ. ಕೊನೆಗೆ ಭಯಪಟ್ಟು, ಸಮೀಪದ ದೇವಸ್ಥಾನಕ್ಕೆ ತೆರಳಿ ನಡೆದ ಘಟನೆಗಳ ಬಗ್ಗೆ ತಿಳಿಸಿದ್ದಾನೆ. ಮಾನೆ ಮತ್ತು ಪವಾರ್ ಅವರು ಕಿಲರೆ ಶವವನ್ನು ಅಲ್ಲಿ ಎಸೆಯಲು ಕಾರಿನಲ್ಲಿ ಅಂಬೋಲಿ ಘಾಟ್‌ಗೆ 400 ಕಿಮೀ ಪ್ರಯಾಣ ಬೆಳೆಸಿದ್ದರು ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read