ರಸ್ತೆಗಿಳಿಯಲಿದೆ ಟಿವಿಎಸ್‌ನ ಹೊಸ ಎಲೆಕ್ಟ್ರಿಕ್‌ ಸ್ಕೂಟರ್‌; ಗ್ರಾಹಕರನ್ನು ದಂಗುಬಡಿಸುವಂತಿದೆ ಇದರ ಫೀಚರ್ಸ್‌….!

ಟಿವಿಎಸ್ ಮೋಟಾರ್ ಕಂಪನಿಯ ಹೊಸ ಎಲೆಕ್ಟ್ರಿಕ್‌ ಸ್ಕೂಟರ್‌ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಸ್ಕೂಟರ್‌ನ ಟೀಸರ್‌ ಈಗಾಗ್ಲೇ ಬಿಡುಗಡೆಯಾಗಿದೆ. ಇದು TVS Creon ಸ್ಕೂಟರ್‌ ಆಗಿರಬಹುದು ಅನ್ನೋದು ಎಲ್ಲರ ನಿರೀಕ್ಷೆ. ಹೊಸ ಟೀಸರ್, ಸ್ಕೂಟರ್‌ನ ಡಿಸ್‌ಪ್ಲೇ ಥೀಮ್‌ನೊಂದಿಗೆ ಹೊರಬಿದ್ದಿದೆ. ಇದರಲ್ಲಿ ಹಲವಾರು ವಿಭಿನ್ನ ರೈಡಿಂಗ್ ಮೋಡ್‌ಗಳನ್ನು ಕಾಣಬಹುದು. ಸ್ಮಾರ್ಟ್‌ಫೋನ್ ಕನೆಕ್ಷನ್‌ ಮತ್ತು ಬ್ಲೂಟೂತ್‌ಗೆ ಸಪೋರ್ಟ್‌ ಕೂಡ ಈ ಸ್ಕೂಟರ್‌ನಲ್ಲಿರಲಿದೆ.

ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಲ್ಟಿ-ವಿಂಡೋ ಡಿಸ್‌ಪ್ಲೇ ಪಡೆಯುತ್ತದೆ. ಇದರ ಹೊರತಾಗಿ, ಸ್ಮಾರ್ಟ್ ವಾಚ್ ಅಡಾಪ್ಟಬಿಲಿಟಿಯನ್ನು ಸಹ ಇದರಲ್ಲಿ ಕಾಣಬಹುದು. TVS Creon ಎಲೆಕ್ಟ್ರಿಕ್ ಸ್ಕೂಟರ್‌ 12kWh ಎಲೆಕ್ಟ್ರಿಕ್ ಮೋಟಾರ್ ಮತ್ತು ಮೂರು ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಹೊಂದಿರುವ ಸಾಧ್ಯತೆಯಿದೆ. ಹಾಗಾಗಿ ಇದನ್ನು ವೇಗವಾಗಿ ಚಾರ್ಜ್ ಮಾಡಬಹುದು. ಈ ಸ್ಕೂಟರ್ ಕೇವಲ 5.1 ಸೆಕೆಂಡ್‌ಗಳಲ್ಲಿ 0-60 kmph ವೇಗವನ್ನು ಪಡೆದುಕೊಳ್ಳುತ್ತದೆ.

ಇದು ಪ್ರತಿ ಚಾರ್ಜ್‌ಗೆ 80 ಕಿಮೀ ವ್ಯಾಪ್ತಿಯನ್ನು ಪಡೆಯುವ ನಿರೀಕ್ಷೆಯಿದೆ. ಈ ಸ್ಕೂಟರ್‌ ಅನ್ನು ಕೇವಲ 60 ನಿಮಿಷಗಳಲ್ಲಿ 0 ರಿಂದ 80 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು.Creon ಸ್ಕೂಟರ್‌ನಲ್ಲಿ ಸ್ಮಾರ್ಟ್‌ಫೋನ್ ಚಾರ್ಜರ್, ಸಿಂಗಲ್-ಚಾನೆಲ್ ABS, ಮುಂಭಾಗ ಮತ್ತು ಹಿಂಭಾಗದ ಡಿಸ್ಕ್ ಬ್ರೇಕ್‌ಗಳು ಮತ್ತು ಬ್ಯಾಟರಿ ಚಾರ್ಜ್ ಸೂಚಕ, ಬ್ಯಾಟರಿ ಹೆಲ್ತ್‌ ಸ್ಟೇಟಸ್‌, ಟ್ಯಾಕೋಮೀಟರ್, ಟ್ರಿಪ್ ಮೀಟರ್, ಓಡೋಮೀಟರ್ ಮತ್ತು TFT ಸ್ಕ್ರೀನ್‌ ಅಳವಡಿಸಲಾಗಿದೆ.

ಕ್ಲೌಡ್ ಕನೆಕ್ಟಿವಿಟಿ, ಜಿಪಿಎಸ್, ಜಿಯೋಫೆನ್ಸಿಂಗ್, ಮೂರು ರೈಡಿಂಗ್ ಮೋಡ್‌ಗಳು, ಸೇಫ್ಟಿ, ಆಂಟಿ-ಥೆಫ್ಟ್ ಫೀಚರ್ಸ್‌ ಮತ್ತು ಪಾರ್ಕ್ ಅಸಿಸ್ಟ್ ಈ ಸ್ಕೂಟರ್‌ನ ವಿಶೇಷತೆ. ಈ ಎಲೆಕ್ಟ್ರಿಕ್ ಸ್ಕೂಟರ್ Ola S1 ನೊಂದಿಗೆ ಪೈಪೋಟಿಗಿಳಿಯುವ ನಿರೀಕ್ಷೆ ಇದೆ. ಇದರಲ್ಲಿ 3.4 kWh ಬ್ಯಾಟರಿ ಪ್ಯಾಕ್ ಲಭ್ಯವಿದೆ. ಇದು ಪ್ರತಿ ಚಾರ್ಜ್‌ಗೆ 121 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ಹೊಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read