Video | ಗಣೇಶನ ದರ್ಶನಕ್ಕೆ ತೆರಳಿದ್ದ ನಟಿಗೆ ಕಹಿ ಅನುಭವ; ಮೊಬೈಲ್ ಕಿತ್ತುಕೊಂಡು ತಳ್ಳಿದ ‘ಬೌನ್ಸರ್’

ಜನಪ್ರಿಯ ಶೋ ಪಾಂಡ್ಯ ಸ್ಟೋರ್‌ನಲ್ಲಿನ ಪಾತ್ರಕ್ಕೆ ಹೆಸರುವಾಸಿಯಾದ ಸೀರಿಯಲ್ ನಟಿ ಸಿಮ್ರಾನ್ ಬುಧರೂಪ್ ಅವರು ಇತ್ತೀಚೆಗೆ ಮುಂಬೈನ ಹೆಸರಾಂತ ಲಾಲ್‌ಬೌಗ್ಚಾ ರಾಜಾ ಪಂಡಲ್‌ಗೆ ಭೇಟಿ ನೀಡಿದಾಗ ತೊಂದರೆ ಅನುಭವಿಸಿದ್ದಾರೆ. ತನ್ನ ತಾಯಿಯೊಂದಿಗೆ ಗಣೇಶನ ಆಶೀರ್ವಾದ ಪಡೆಯಲು ಪಂಡಲ್‌ಗೆ ಭೇಟಿ ನೀಡಿದ ಸಿಮ್ರಾನ್ ಆಘಾತಕಾರಿ ಅನುಭವವನ್ನು ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸರದಿಯಲ್ಲಿದ್ದ ಸಿಮ್ರಾನ್ ಹಿಂದೆ ಆಕೆಯ ತಾಯಿ ನಿಂತಿದ್ದರು. ಈ ವೇಳೆ ದೇವರ ದರ್ಶನ ಪಡೆಯುತ್ತಿದ್ದ ಸಿಮ್ರಾನ್ ನ ವಿಡಿಯೋ ಮಾಡಲು ಅವರ ತಾಯಿ ಪ್ರಾರಂಭಿಸಿದ್ದಾರೆ. ಆದರೆ ಈ ವೇಳೆ ಸಿಬ್ಬಂದಿಯೊಬ್ಬರು ಆಕೆಯ ತಾಯಿಯ ಕೈಯಿಂದ ಫೋನ್ ಕಸಿದುಕೊಂಡರು . ಅದನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಅವರು ನಟಿಯನ್ನು ತಳ್ಳಿದ್ದು ವಾಗ್ವಾದದ ಸಂದರ್ಭದಲ್ಲಿ ಅವರು ಒರಟಾಗಿ ವರ್ತಿಸುತ್ತಿದ್ದರು ಎಂದು ಸಿಮ್ರಾನ್ ಹೇಳಿಕೊಂಡಿದ್ದಾರೆ.

ಸಿಮ್ರಾನ್ ಇನ್ಸ್ಟಾಗ್ರಾಮ್ನಲ್ಲಿ ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಆಕೆಯ ತಾಯಿ ಮಗಳನ್ನು ಎಳೆದುಕೊಳ್ಳಲು ಪ್ರಯತ್ನಿಸಿದಾಗ ಮಹಿಳಾ ಬೌನ್ಸರ್ ನೊಂದಿಗೆ ನಟಿ ಜಗಳವಾಡುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read