ಟರ್ಕಿ-ಸಿರಿಯಾದ ವಿನಾಶಕಾರಿ ಭೂಕಂಪಗಳ ನಂತರ, ಟರ್ಕಿಯ ನಿವಾಸಿ 33 ವರ್ಷದ ಮುಸ್ತಫಾ ಅವ್ಸಿ 261 ಗಂಟೆಗಳ ಕಾಲ ಖಾಸಗಿ ಆಸ್ಪತ್ರೆಯ ಭಗ್ನಾವಶೇಷಗಳ ಅಡಿಯಲ್ಲಿ ಮಲಗಿದ್ದರು. ಆಹಾರವಿಲ್ಲ, ನೀರಿಲ್ಲ ಮತ್ತು ಸಾಕಷ್ಟು ಗಾಳಿ ಇಲ್ಲದೇ ಅವರು ಬದುಕಿ ಉಳಿದಿದ್ದಾರೆ.
ಪವಾಡ ಸದೃಶ ರೀತಿಯಲ್ಲಿ ಅವರನ್ನು ರಕ್ಷಣೆ ಮಾಡಲಾಗಿದೆ. ರಕ್ಷಿಸಲ್ಪಟ್ಟ ನಂತರ ಅವರು ಮೊದಲ ಬಾರಿಗೆ ತಮ್ಮ ಕುಟುಂಬದೊಂದಿಗೆ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.
ಟರ್ಕಿಯ ಆರೋಗ್ಯ ಸಚಿವರು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಮುಸ್ತಫಾ, ಸ್ಟ್ರೆಚರ್ ಮೇಲೆ ಮಲಗಿರುವುದನ್ನು ನೋಡಬಹುದು. ಅವರನ್ನು ಥರ್ಮಲ್ ಕಂಬಳಿಯಲ್ಲಿ ಸುತ್ತಲಾಗಿದೆ. ಈ ಕಷ್ಟದ ನಡುವೆಯೂ ತಮ್ಮ ಕುಟುಂಬಸ್ಥರು ಚೆನ್ನಾಗಿದ್ದಾರೆಯೇ ಎನ್ನುವ ಕಾಳಜಿ ಅವರದ್ದು. ನಂತರ ಸಂಬಂಧಿಕರೊಂದಿಗಿನ ಕರೆಯಲ್ಲಿ ಉತ್ಸಾಹದಿಂದ ಮಾತನಾಡುವುದನ್ನು ವಿಡಿಯೋದಲ್ಲಿ ನೋಡಬಹುದು,
ಅವರ ಕುಟುಂಬ ಚೆನ್ನಾಗಿದೆ ಎಂದು ಫೋನ್ನ ಇನ್ನೊಂದು ತುದಿಯಲ್ಲಿ ಅಳುವ ಧ್ವನಿ ಕೇಳಬಹುದು. ಅವರೆಲ್ಲರೂ ಬದುಕುಳಿದಿದ್ದು, ನಿಮಗಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ. ಕೃತಜ್ಞರಾಗಿರುವ ಮುಸ್ತಫಾ ಫೋನ್ ಹಿಡಿದಿರುವ ರಕ್ಷಕನ ಕೈಯನ್ನು ಚುಂಬಿಸುತ್ತಿರುವುದು ಕಂಡುಬರುತ್ತದೆ.
https://twitter.com/drfahrettinkoca/status/1626363710078943235?ref_src=twsrc%5Etfw%7Ctwcamp%5Etweetembed%7Ctwterm%5E1626363710078943235%7Ctwgr%5E9c12570d6145b09696d45aa88d66beb7a54ab7a5%7Ctwcon%5Es1_&ref_url=https%3A%2F%2Fwww.news18.com%2Fbuzz%2Fturkey-earthquake-man-rescued-after-11-days-wants-to-meet-family-7134307.html