ಕೊಪ್ಪಳ: ಭಾರಿ ಮಳೆ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಈ ನಡುವೆ ತುಂಗಭದ್ರಾ ಡ್ಯಾಂ ನ ೬ ಕ್ರಸ್ಟ್ ಗೇತ್ ಗಳು ಬೆಂಡಾಗಿದ್ದು, ಸುತ್ತಮುತ್ತಲ ಗ್ರಾಮಸ್ಥಲ್ಲಿ ಆತಂಕ ಮನೆ ಮನೆಮಾಡಿದೆ.
ವರ್ಷದ ಹಿಂದೆ ತುಂಗಭದ್ರಾ ಡ್ಯಾಂನ 19ನೇ ಕ್ರಸ್ಟ್ ಗೇಟ್ ನೀರಿನ ರಭಸಕ್ಕೆ ಕೊಚ್ಚಿ ಹೋಗಿ ಅಪಾರ ಪ್ರಮಾಣದ ನೀರು ಪೋಲಾಗಿತ್ತು. ಆತಂಕವೂ ಎದುರಾಗಿತ್ತು. ಒಂದು ವಾರ ಕಾರ್ಯಾಚರಣೆ ನಡೆಸಿ ಹೊಸ ಗೇಟ್ ಅಳವಡಿಸಲಾಗಿತ್ತು. ಇದೀಗ ಆರು ಕ್ರಸ್ಟ್ ಗೇಟ್ ಗಳಲ್ಲಿ ದೋಷ ಕಂಡುಬಂದಿದ್ದು, ಆರು ಗೇಟ್ ಗಳು ಬೆಂಡಾಗಿವೆ.
ತುಂದಭದ್ರಾ ಡ್ಯಾಂ ನ 11, 18, 20, 24, 27 ಹಾಗೂ 28 ನೇ ಕ್ರಸ್ಟ್ ಗೇಟ್ ಗಳು ಬಾಗಿವೆ. ಬೆಂಡ್ ಆಗಿರುವ ಕ್ರಸ್ಟ್ ಗೇಟ್ ಗಳ ಮೂಲಕ ಜಲಾಶಯದ ನೀರು ವ್ಯಸ್ಥವಾಗಿ ಹರಿಯುತ್ತುದೆ. ನೀರು ಹರಿಸಲು ಯತ್ನಿಸಿದರೆ ಗೇತ್ ಗಳು ತುಂಡಾಗುವ ಸಾಧ್ಯತೆ ಇದೆ. ಇದರಿಂದ ಆತಂಕ ಎದುರಾಗಿದೆ. ಗೇಟ್ ತುಮ್ಡಾದರೆ ಅಪಾಯ ಎದುರಾಗಲಿದೆ ಎಂದು ಅಧಿಕಾರಿಗಳು ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ನಾಲ್ಕನೇ ಕ್ರಸ್ಟ್ ಗೇಟ್ ನಲ್ಲಿಯೂ ಇದೇ ರೀತಿ ಸಮಸ್ಯೆಯಾಗಿದ್ದು, ಗರಿಷ್ಠ ಎರದು ಅಡಿ ಮಾತ್ರ ಗೇಟ್ ಎತ್ತಿ ನೀರು ಹರಿಸಲು ಸಾಧ್ಯವಾಗುತ್ತಿದೆ. ಒಟ್ಟು 105.788 ಟಿಎಂಸಿ ಅಡಿ ಸಂಗ್ರಹಣಾ ಸಾಮರ್ಥ್ಯವುಳ್ಳ ಜಲಾಶಯದಲ್ಲಿ ಗೇಟ್ ಗಳ ನಿರಂತರ ಸಮಸ್ಯೆಯಿಂದಾಗಿ ಈ ಬಾರಿ ಮುಂಗಾರಿನಲ್ಲಿ ಕೇವಲ 80 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹಿಸಲಾಗಿದೆ. ಈವರೆಗೆ ಅಂದಾಜಿ 130 ಟಿಎಂಸಿ ನೀರು ನದಿ ಪಾಲಾಗಿದೆ.