BREAKING: ಕೃಷಿಹೊಂಡದಲ್ಲಿ ಬಿದ್ದು ಇಬ್ಬರು ಸಹೋದರಿಯರು ಸಾವು: ಸಾವಿನಲ್ಲಿಯೂ ಒಂದಾದ ಅಕ್ಕ-ತಂಗಿ

ತುಮಕೂರು: ಕೃಷಿಹೊಂಡದಲ್ಲಿ ಬಿದ್ದು ಇಬ್ಬರು ಸಹೋದರಿಯರು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತುಮಕೂರಿನಲ್ಲಿ ನಡೆದಿದೆ.

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹರ್ಷಪುರ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಗಂಗಮ್ಮ (37) ಹಾಗೂ ಶಕುಂತಲಾ (36) ಮೃತ ದುರ್ದೈವಿಗಳು. ದನ ಮೇಯಿಸಲು ಹೋಗಿದ್ದ ವೇಳೆ ಈ ಘಟನೆ ನಡೆದಿದೆ.

ಕೃಷಿಹೊಂಡಕ್ಕೆ ಬಿದ್ದ ಓರ್ವರನ್ನು ರಕ್ಷಿಸಲು ಹೋಗಿ ಇಬ್ಬರೂ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read