ತುಮಕೂರು: ತುಮಕೂರಿನ ಸಿದ್ದಗಂಗಾ ಮಠದಲ್ಲಿ 8 ಅಡಿ ಉದ್ದದ ಹೆಬ್ಬಾವು ಪ್ರತ್ಯಕ್ಷವಾಗಿದ್ದು, ಮಠದಲ್ಲಿ ಆತಂಕದ ವಾತಾವರಣ ಮೂಡಿಸಿದೆ.
ಸಿದ್ದಗಂಗಾ ಮಠದ ಆವರಣದಲ್ಲಿರುವ ದೇವಸ್ಥಾನದಲ್ಲಿ ಹೆಬ್ಬಾವು ಪ್ರತ್ಯಕ್ಷವಾಗಿದೆ. ದೇವಸ್ಥಾನದ ಕಿಟಕಿ ಮೂಲಕ ಪ್ರವೇಶಿಸಿದೆ. ಮಠದ ಸಿಬ್ಬಂದಿ, ಮಕ್ಕಳು ಬೃಹತ್ ಗಾತ್ರದ ಹಾವನ್ನು ಕಂಡು ಗಾಬರಿಯಾಗಿದ್ದಾರೆ.
ತಕ್ಷಣ ಮಠದ ಸಿಬ್ಬಂದಿಗಳು ಉರಗ ರಕ್ಷಕ ಕಾರ್ತಿಕ್ ಹಾಗೂ ಸೂರ್ಯ ಎಂಬುವವರಿಗೆ ಮಾಹಿತಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಉರಗ ತಜ್ಞರು ಹೆಬ್ಬಾವನ್ನು ಸೆರೆಹಿಡಿದು ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಟ್ಟಿದ್ದಾರೆ.