ತುಮಕೂರು: ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಕೊಳಾಲ ವ್ಯಾಪ್ತಿಯಲ್ಲಿ ರಸ್ತೆಯುದ್ದಕ್ಕೂ ಶವದ ತುಂಡುಗಳು ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾಗಲೇ 30 ಕಿ.ಮೀ ದೂರದಲ್ಲಿ ರುಂಡ ಪತ್ತೆಯಾಗಿದೆ.
ಚಿಂಪುಗಾನಹಳ್ಳಿಯ ಮುತ್ಯಾಲಮ್ಮ ದೇವಸ್ಥಾನದಿಂದ ವೆಂಕಟಾಪುರದವರೆಗೆ ದೇಹದ ಕೈ ಹಾಗೂ ಕರುಳು ಪತ್ತೆಯಾಗಿತ್ತು. ಈಗ ಕೊರಟಗೆರೆಯ ಸಿದ್ದರಬೆಟ್ಟ ರಸ್ತೆಯಲ್ಲಿ ರುಂಡ ಪತ್ತೆಯಾಗಿದೆ. ಅಲ್ಲದೇ ಸಿದ್ದರಬೆಟ್ಟದ ರಸ್ತೆಯ ಪಕ್ಕದಲ್ಲಿ ಶವದ ಕಾಲುಗಳು ಪತ್ತೆಯಾಗಿವೆ. ರುಂಡದ ಮುಡಿಗೆ ಹಾಕುವ ಕ್ಲಿಪ್ ಕೂಡ ಸಿಕ್ಕಿದೆ. ಪತ್ತೆಯಾದ ಮೃತದೇಹದ ಭಾಗಗಳು ಮಹಿಳೆಯದ್ದು ಎಂಬ ಅನುಮಾನ ವ್ಯಕ್ತವಾಗಿದೆ.
ಒಟ್ಟು 8ಕ್ಕೂ ಹೆಚ್ಚು ಸ್ಥಳಗಳಲ್ಲಿ ಕವರ್ ಗಳಲ್ಲಿ ದೇಹದ ತುಂಡುಗಳು ಪತ್ತೆಯಾಗಿದ್ದು, ಕೊರಟಗೆರೆ ಪೊಲೀಸರು ತನಿಖೆ ನಡೆಸಿದ್ದಾರೆ.