ತುಮಕೂರು: ತುಮಕೂರಿನಲ್ಲಿ ಒಂದೇ ದಿನ ಐವರ ಮೇಲೆ ದಾಳಿ ನಡೆಸಿ, ಮನೆಯೊಂದರಲ್ಲಿ ಅವತುಕುಳಿತಿದ್ದ ಚಿರತೆಯನ್ನು ಕೊನೆಗೂ ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬುಧವಾರ ಚಿರತೆಯೊಂದು ತುಮಕೂರಿನ ವಿವಿಧೆಡೆ ಐವರ ಮೇಲೆ ದಾಳಿ ನಡೆಸಿತ್ತು. ನಡುವನಹಳ್ಳಿ ಗ್ರಾನದ ಶಿವಣ್ಣ ಅವರ ಪತ್ನಿ ವನಜಾಕ್ಷಿ ತೋಟದಲ್ಲಿ ದನಗಳನ್ನು ಮೇಯುಸುತ್ತಿದ್ದಾಗ ಚಿರತೆ ದಾಳಿ ನಡೆಸಿತ್ತು. ಬಳಿಕ ಗೋಣಿ ತುಮಕೂರಿನತ್ತ ಪರಾರುಯಾಗಿತ್ತು. ಅಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಹುಚ್ಚಮ್ಮ ಎಂಬುವವರ ಮೇಲೆ ದಾಳಿ ನಡೆಸಿತ್ತು. ಬಳಿಕ ಬೋರೇಗೌಡ ಎಂಬುವವರ ಮೇಲೆ, ದೇವಿಹಳ್ಳಿಯ ಶೇಖರ್ ಎಂಬುವವರ ಮೇಲೆ ದಾಳಿ ನಡೆಸಿತ್ತು.
ಬಳಿಕ ಶೇಖರ್ ಅವರ ಮನೆಗೆ ನುಗ್ಗಿದ್ದ ಚಿರತೆ ಅಲ್ಲಿಯೇ ಅಡಗಿ ಕುಳಿತಿತ್ತು. ವಿಶ್ಜಯ ತಿಳಿಯುತ್ತಿದ್ದಂತೆ ಮೈಸೂರಿನಿಂದ ಆಗಮಿಸಿದ ಅರಣ್ಯ ಇಲಾಖೆಯ ವಿಶೇಷ ತಂಡ ಚಿರತೆ ಸೆರೆಗಾಗಿ ನಿರಂತರ ಕಾರ್ಯಾಚರಣೆ ಆರಂಭಿಸಿತ್ತು. ಇದೀಗ ಚಿರತೆ ಸೆರೆ ಹಿಡಿಯಲಾಗಿದ್ದು, ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ.