ಮೆಟ್ರೋದಲ್ಲಿ 20 ವರ್ಷದ ಯುವತಿಗೆ ಅವಮಾನ: ʼನೀನು 50 ವರ್ಷದವಳಂತೆ ಕಾಣುತ್ತೀಯಾʼ ಎಂದು ಹಂಗಿಸಿದ ಮಹಿಳೆ | Video

ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ 20 ವರ್ಷದ ಯುವತಿಯನ್ನು ಮಧ್ಯವಯಸ್ಕ ಮಹಿಳೆಯೊಬ್ಬರು ಅವಮಾನಿಸಿದ್ದಾರೆ. 42 ವರ್ಷದ ಮಹಿಳೆ ಯುವತಿಯನ್ನು 50 ವರ್ಷದವಳಂತೆ ಕಾಣುತ್ತೀಯಾ ಎಂದು ಹೇಳಿದ್ದಾರೆ. ಅಲ್ಲದೆ, ರೈಲಿನಲ್ಲಿ ಜಗಳವಾಡುತ್ತಿದ್ದಾಗ ಆಕೆಯ ವರ್ತನೆ ಬಗ್ಗೆಯೂ ಟೀಕಿಸಿದ್ದಾರೆ. ಸಹ ಪ್ರಯಾಣಿಕರೊಬ್ಬರು ಮಧ್ಯಪ್ರವೇಶಿಸಿ ಯಾರೊಬ್ಬರ ದೇಹದ ಬಗ್ಗೆಯೂ ಅವಮಾನಿಸುವುದು ತಪ್ಪು ಎಂದು ಹೇಳಿ ಮಹಿಳೆಯ ವರ್ತನೆಯನ್ನು ಖಂಡಿಸಿದ್ದಾರೆ.

ಈ ಘಟನೆಯನ್ನು ಕ್ಯಾಮೆರಾದಲ್ಲಿ ಚಿತ್ರೀಕರಿಸಿದ ವಿಡಿಯೋ ದೆಹಲಿ ಮೆಟ್ರೋದಲ್ಲಿ ನಡೆದ ಮಹಿಳೆಯರ ನಡುವಿನ ಗದ್ದಲದ ಭಿನ್ನಾಭಿಪ್ರಾಯವನ್ನು ತೋರಿಸಿದೆ. ವಿಡಿಯೋದಲ್ಲಿ, ಮಧ್ಯವಯಸ್ಕ ಮಹಿಳೆ ಕೂಗುತ್ತಿರುವುದು ಮತ್ತು ಆಹಾರ ಸೇವಿಸಿದ ಪ್ರಯಾಣಿಕರು ಕೋಚ್‌ನಿಂದ ಹೊರಡುವ ಮೊದಲು ತನ್ನನ್ನು ನಿಂದಿಸಿದ್ದಾರೆ ಎಂದು ಹೇಳುತ್ತಿರುವುದು ಕೇಳಿಬಂದಿದೆ. ಅವರು ಹೊರಟು ಹೋದ ನಂತರವೂ, ಮಹಿಳೆ ಶಾಂತವಾಗಿಲ್ಲ. ರೈಲಿನಲ್ಲಿ ಚಿಪ್ಸ್ ತಿನ್ನುವ ನಡವಳಿಕೆಯನ್ನು ಬೆಂಬಲಿಸಿದ ಜನರೊಂದಿಗೆ ವಾದಿಸುತ್ತಾ ಮತ್ತು ಕೂಗಾಡಿದ್ದಾರೆ.

ಚಿಪ್ಸ್ ತಿಂದವವರನ್ನು 20 ವರ್ಷದ ಯುವತಿ ಮತ್ತು ಮತ್ತೊಬ್ಬ ಪ್ರಯಾಣಿಕರು ಬೆಂಬಲಿಸಿದಾಗ, ಈ ಮಹಿಳೆ ಅವರೊಂದಿಗೆ ಜಗಳವನ್ನು ಮುಂದುವರಿಸಿದ್ದು, ಯುವತಿಯ ದಪ್ಪ ದೇಹದ ಬಗ್ಗೆ ನಿಂದಿಸಿ, “ನೀನು 50 ವರ್ಷದವಳಂತೆ ಕಾಣುತ್ತೀಯಾ. ನಿನ್ನನ್ನು ನೀನು ನೋಡಿಕೋ” ಎಂದು ಹೇಳಿದ್ದಾರೆ.

ಈ ಟೀಕೆಗಳ ಹೊರತಾಗಿಯೂ, ಯುವತಿ ಶಾಂತವಾಗಿ ಕೂಗಾಡುತ್ತಿದ್ದ ಮಹಿಳೆಗೆ ʼನೀವು ತುಂಬಾ ಸುಂದರವಾಗಿದ್ದೀರಿʼ ಎಂದು ಹೇಳಿದ್ದಾರೆ. ದೇಹದ ಬಗ್ಗೆ ನಿಂದಿಸುವ ಕೃತ್ಯದ ವಿರುದ್ಧ ಧ್ವನಿ ಎತ್ತಿದ ಮತ್ತೊಬ್ಬ ಪ್ರಯಾಣಿಕರು “ಈ ಮಹಿಳೆ ಸ್ವತಃ ತೊಂದರೆಗೊಳಗಾಗಿದ್ದಾಳೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳುತ್ತಿರುವುದು ಕೇಳಿಬಂದಿದೆ. ನಂತರ ಜನರು ಜಗಳವಾಡುತ್ತಿದ್ದ ಮಹಿಳೆಯನ್ನು ನಿರ್ಲಕ್ಷಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read