ತಲೆ ಕೂದಲು ಉದುರುವ ಸಮಸ್ಯೆಗೆ ಮಾಡಿ ಈ ಪರಿಹಾರ

ತಲೆಯಲ್ಲಿ ಸುಮ್ಮನೆ ಕೈಯಾಡಿಸಿದರೆ ಸಾಕು, ಒಂದಷ್ಟು ಕೂದಲು ಕೈಗೆ ಬಂದು ಬಿಡುತ್ತದೆ. ಈ ರೀತಿಯಾಗುವಾಗ ಯಾರಿಗಾದರೂ ಟೆನ್ಷನ್‌ ಆಗುವುದು ಸಹಜ. ಕೂದಲು ಉದುರುವುದಕ್ಕೆ ಹಲವಾರು ಕಾರಣಗಳಿವೆ.

ಲೈಫ್‌ ಸ್ಟೈಲ್‌ ನಿಂದಾಗಿ ಕೂದಲು ಉದುರುತ್ತಿದ್ದರೆ, ಈ ಮನೆ ಮದ್ದು ಕೂದಲು ಉದುರುವ ಸಮಸ್ಯೆಯನ್ನು ಕಡಿಮೆ ಮಾಡುವಲ್ಲಿ ಸಹಕಾರಿ.

ಬಿಸಿ ಎಣ್ಣೆಯ ಮಸಾಜ್‌

ಎಣ್ಣೆಯನ್ನು ಬಿಸಿ ಮಾಡಿ, ಅದು ಉಗುರು ಬೆಚ್ಚಗೆ ಇರುವಾಗ ಅದರಿಂದ ಚೆನ್ನಾಗಿ ಮಸಾಜ್‌ ಮಾಡಿ. ನಂತರ ಒಂದು ಟವಲ್ ಅನ್ನು ತೆಳು ಬಿಸಿ ನೀರಿನಲ್ಲಿ ಅದ್ದಿ ಅದನ್ನು ಹಿಂಡಿ ತಲೆಗೆ ಸುತ್ತಿ. ಈ ರೀತಿ ಮಾಡುವುದರಿಂದ ಕೂದಲಿನ ಬುಡಕ್ಕೆ ಉತ್ತಮ ಆರೋಗ್ಯ ಸಿಕ್ಕಿ ಕೂದಲು ಉದುರುವುದು ಕಡಿಮೆಯಾಗುವುದು.

ಈರುಳ್ಳಿ ಜ್ಯೂಸ್

ತಲೆ ಹೊಟ್ಟಿನ ಸಮಸ್ಯೆಯಿಂದ ಕೂದಲು ಉದುರುತ್ತಿದ್ದರೆ, ಈರುಳ್ಳಿ ರಸವನ್ನು ಎಣ್ಣೆಯೊಂದಿಗೆ ಮಿಶ್ರ ಮಾಡಿ ತಲೆಗೆ ಹಚ್ಚಿ. ನಂತರ ಒಂದು ಗಂಟೆಯ ಬಳಿಕ ತಲೆ ಕೂದಲು ತೊಳೆಯಿರಿ.

ಬೀಟ್‌ ರೂಟ್

ಬಾಹ್ಯ ಆರೈಕೆ ರೀತಿಯಲ್ಲೇ ಆಂತರಿಕ ಆರೈಕೆ ಕೂಡ ಮುಖ್ಯ. ಬೀಟ್‌ ರೂಟ್ ಕೂದಲಿನ ಆರೋಗ್ಯ ವೃದ್ಧಿಸುವುದರಿಂದ ಬೀಟ್‌ ರೂಟ್ ಅನ್ನು ನಿಮ್ಮ ಡಯಟ್‌ ನಲ್ಲಿ ಸೇರಿಸಿ.

ಗ್ರೀನ್‌ ಟೀ

ಗ್ರೀನ್‌ ಟೀ ಕೂದಲಿನ ಉತ್ಪತ್ತಿಯನ್ನು ಹೆಚ್ಚು ಮಾಡುತ್ತದೆ. ಇದನ್ನು ಕಂಡೀಷನರ್‌ ಆಗಿ ಬಳಸಿ ಸ್ವಲ್ಪ ದಿನದಲ್ಲಿಯೇ ಕೂದಲಿನಲ್ಲಿ ಆಗುವ ಬದಲಾವಣೆಯನ್ನು ಗಮನಿಸಿ.

ಧ್ಯಾನ

ಮಾನಸಿಕ ಒತ್ತಡ ಕೂಡ ಕೂದಲು ಉದುರಲು ಮುಖ್ಯ ಕಾರಣ. ಆದ್ದರಿಂದ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ. ಇದಕ್ಕೆ ಧ್ಯಾನ ಸಹಾಯ ಮಾಡುವುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read