ಮಳೆಗಾಲದಲ್ಲಿ ಕಾಡುವ ಹೊಟ್ಟೆನೋವಿಗೆ ಈ ಮನೆಮದ್ದುಗಳನ್ನು ಟ್ರೈ ಮಾಡಿ, ತಕ್ಷಣ ಸಿಗುತ್ತೆ ಪರಿಹಾರ….!

ಮಳೆಗಾಲದಲ್ಲಿ ಹೊಟ್ಟೆಯನ್ನು ಸರಿಯಾಗಿಟ್ಟುಕೊಳ್ಳುವುದು ದೊಡ್ಡ ಸವಾಲು. ಪದೇ ಪದೇ ಅಜೀರ್ಣ, ಬೇಧಿಯ ಸಮಸ್ಯೆ ಆಗಬಹುದು. ಈ ಸಮಯದಲ್ಲಿ, ಬ್ಯಾಕ್ಟೀರಿಯಾಗಳು ಹೆಚ್ಚು ಬೆಳೆಯುತ್ತವೆ ಮತ್ತು ಕಲುಷಿತ ಆಹಾರದಿಂದಾಗಿ ಹೊಟ್ಟೆಯಲ್ಲಿ ಏರುಪೇರಾಗುತ್ತದೆ. ಲೂಸ್‌ ಮೋಶನ್‌ ನಮ್ಮನ್ನು ಹಿಂಡಿ ಹಾಕುತ್ತದೆ. ಬೇಧಿಯಿದ್ದಾಗ ದೇಹದಲ್ಲಿ ನೀರು ಮತ್ತು ಪೋಷಣೆಯ ಕೊರತೆ ಇರುತ್ತದೆ. ಇದಕ್ಕೆ ವೈದ್ಯರ ಬಳಿ ತೆರಳುವುದಕ್ಕಿಂತ ಕೆಲವೊಂದು ಅದ್ಭುತ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ. ಇವುಗಳನ್ನು ಸೇವಿಸುವುದರಿಂದ ಸುಲಭವಾಗಿ ಲೂಸ್ ಮೋಷನ್‌ನಿಂದ ಮುಕ್ತರಾಗಬಹುದು.

ಬೇಧಿಗೆ ಸುಲಭದ ಮನೆಮದ್ದು…

ಬೇಧಿ ನಿಲ್ಲಿಸಲು ಮೊಸರು ಅತ್ಯಂತ ಪರಿಣಾಮಕಾರಿ. ಮೊಸರು ನೈಸರ್ಗಿಕ ಪ್ರೋಬಯಾಟಿಕ್ ಆಗಿದ್ದು, ಇದರಲ್ಲಿ ಆರೋಗ್ಯಕರ ಬ್ಯಾಕ್ಟೀರಿಯಾವು ಲೂಸ್‌ ಮೋಷನ್‌ನ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತದೆ. ಆದ್ದರಿಂದ ಹೊಟ್ಟೆ ಕೆಟ್ಟಾಗ ಮೊಸರನ್ನು ಸೇವಿಸಿ. ಲೂಸ್‌ ಮೋಷನ್‌ನಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುತ್ತದೆ ಮತ್ತು ಡಿಹೈಡ್ರೇಶನ್‌ಗೂ ತುತ್ತಾಗಬಹುದು. ಹಾಗಾಗಿ ಉಪ್ಪು, ಸಕ್ಕರೆ ಮತ್ತು ನೀರನ್ನು ಬೆರೆಸಿ ದ್ರಾವಣವನ್ನು ತಯಾರಿಸಬೇಕು. ರೋಗಿಗೆ ನಿರಂತರವಾಗಿ ಅದನ್ನು ಕುಡಿಯಲು ನೀಡಬೇಕು. ಇದರಿಂದ ನೀರಿನ ಕೊರತೆಯೂ ನೀಗುತ್ತದೆ ಮತ್ತು ಹೊಟ್ಟೆಯ ಸೋಂಕು ಸಹ ಕಡಿಮೆಯಾಗುತ್ತದೆ.

ಲೂಸ್‌ ಮೋಷನ್‌ ಇದ್ದಾಗ ರೋಗಿಗೆ ಬಾಳೆಹಣ್ಣು ತಿನ್ನಿಸಬೇಕು. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಇರುತ್ತದೆ. ಇದು ದೇಹದಲ್ಲಿನ ಎಲೆಕ್ಟ್ರೋಲೈಟ್‌ಗಳ ಕೊರತೆಯನ್ನು ನಿವಾರಿಸುತ್ತದೆ. ಅದಕ್ಕಾಗಿಯೇ ರೋಗಿಗೆ ಪ್ರತಿನಿತ್ಯ ಒಂದು ಅಥವಾ ಎರಡು ಮಾಗಿದ ಬಾಳೆಹಣ್ಣು ತಿನ್ನಿಸುವುದರಿಂದ ಪರಿಹಾರ ಸಿಗುತ್ತದೆ. ಎಳನೀರಿನಲ್ಲಿ ಕೂಡ ಬಹಳಷ್ಟು ಪೊಟ್ಯಾಸಿಯಮ್ ಕಂಡುಬರುತ್ತದೆ. ಇದು ದೇಹದಲ್ಲಿನ ಎಲೆಕ್ಟ್ರೋಲೈಟ್‌ಗಳ ಕೊರತೆಯನ್ನು ಪೂರೈಸುತ್ತದೆ.

ಇದರಿಂದಾಗಿ ದೇಹವು ಡಿಹೈಡ್ರೇಟ್‌ ಆಗುವುದಿಲ್ಲ. ಲೂಸ್ ಮೋಷನ್ ಕೂಡ ತ್ವರಿತವಾಗಿ ನಿಲ್ಲುತ್ತದೆ. ನಿಂಬೆ ರಸವನ್ನು ಕುಡಿಯುವುದರಿಂದಲೂ ಬೇಧಿಯನ್ನು ನಿಯಂತ್ರಿಸಬಹುದು. ನಿಂಬೆ ರಸದ ಆಮ್ಲೀಯ ಅಂಶಗಳು ಕರುಳಿನಲ್ಲಿ ಅಡಗಿರುವ ಬ್ಯಾಕ್ಟೀರಿಯಾವನ್ನು ಕೊಲ್ಲುತ್ತವೆ ಮತ್ತು ಇದು ಕರುಳನ್ನು ಶುದ್ಧಗೊಳಿಸುತ್ತದೆ. ಆದ್ದರಿಂದ ನೀರಿಗೆ ನಿಂಬೆರಸ ಬೆರೆಸಿಕೊಂಡು ಕುಡಿಯಿರಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read