BREAKING: ಜಿ20 ಶೃಂಗಸಭೆಯಿಂದ ದಕ್ಷಿಣ ಆಫ್ರಿಕಾ ಬಹಿಷ್ಕಾರ: ಡೊನಾಲ್ಡ್ ಟ್ರಂಪ್ ಘೋಷಣೆ

ವಾಷಿಂಗ್ಟನ್: ಜಿ20 ಶೃಂಗಸಭೆಯಿಂದ ದಕ್ಷಿಣ ಆಫ್ರಿಕಾ ಬಹಿಷ್ಕರಿಸಲಾಗಿದೆ. ಮುಂದಿನ ಜಿ20 ಶೃಂಗಸಭೆಯಿಂದ ದಕ್ಷಿಣ ಆಫ್ರಿಕಾವನ್ನು ಹೊರಗಿಡಲಾಗಿದೆ ಎಂದು ದಕ್ಷಿಣ ಆಫ್ರಿಕಾ ಹೊರಗಿಡುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದಾರೆ.

ಫ್ಲೋರಿಡಾದ ಮಿಯಾಮಿಯಲ್ಲಿ ಮುಂದಿನ ವರ್ಷ ನಡೆಯಲಿರುವ ಗ್ರೂಪ್ ಆಫ್ 20(ಜಿ20) ಅಂತರಸರ್ಕಾರಿ ವೇದಿಕೆಯಲ್ಲಿ ದಕ್ಷಿಣ ಆಫ್ರಿಕಾ ಭಾಗವಹಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಆಫ್ರಿಕನ್ ದೇಶದಲ್ಲಿ ಬಿಳಿಯರ “ನರಮೇಧ” ನಡೆಯುತ್ತಿದೆ ಎಂಬ ಸುಳ್ಳು ಹೇಳಿಕೆಗಳನ್ನು ಟ್ರಂಪ್ ನವೀಕರಿಸಿದ್ದಾರೆ. ದಕ್ಷಿಣ ಆಫ್ರಿಕಾ ಇನ್ನು ಮುಂದೆ ಯುಎಸ್‌ನಿಂದ ಹಣವನ್ನು ಪಡೆಯುವುದಿಲ್ಲ ಎಂದು ಪುನರುಚ್ಛರಿಸಿದ್ದಾರೆ.

ದಕ್ಷಿಣ ಆಫ್ರಿಕಾ ಎಲ್ಲಿಯೂ ಸದಸ್ಯತ್ವಕ್ಕೆ ಅರ್ಹವಾದ ದೇಶವಲ್ಲ ಎಂದು ಜಗತ್ತಿಗೆ ತೋರಿಸಿದೆ. ನಾವು ಅವರಿಗೆ ಎಲ್ಲಾ ಪಾವತಿಗಳು ಮತ್ತು ಸಬ್ಸಿಡಿಗಳನ್ನು ನಿಲ್ಲಿಸಲಿದ್ದೇವೆ, ಇದು ತಕ್ಷಣವೇ ಜಾರಿಗೆ ಬರಲಿದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read