ಬಡ ದೇಶಗಳಿಗೆ HIV, ಮಲೇರಿಯಾ ಸೇರಿ ಜೀವ ರಕ್ಷಕ ಔಷದ ಪೂರೈಕೆ ಸ್ಥಗಿತಗೊಳಿಸಿದ ಅಮೆರಿಕ

ವಾಷಿಂಗ್ಟನ್: ಬಡ ದೇಶಗಳಿಗೆ ಹೆಚ್‌ಐವಿ, ಮಲೇರಿಯಾ ಔಷಧಿಗಳ ಪೂರೈಕೆಯನ್ನು ಸ್ಥಗಿತಗೊಳಿಸಲು ಟ್ರಂಪ್ ಆದೇಶ ಹೊರಡಿಸಿದ್ದಾರೆ.

ಯುಎಸ್‌ಐಐಡಿ ಬೆಂಬಲಿಸುವ ದೇಶಗಳಲ್ಲಿ ಹೆಚ್‌ಐವಿ, ಮಲೇರಿಯಾ ಮತ್ತು ಕ್ಷಯರೋಗಕ್ಕೆ ಜೀವರಕ್ಷಕ ಔಷಧಿಗಳ ಪೂರೈಕೆಯನ್ನು ಹಾಗೂ ನವಜಾತ ಶಿಶುಗಳಿಗೆ ವೈದ್ಯಕೀಯ ಸರಬರಾಜುಗಳನ್ನು ನಿಲ್ಲಿಸಲು ಟ್ರಂಪ್ ಆಡಳಿತವು ಕ್ರಮ ಕೈಗೊಂಡಿದೆ ಎಂದು ರಾಯಿಟರ್ಸ್ ಪರಿಶೀಲಿಸಿದ ಜ್ಞಾಪಕ ಪತ್ರವು ತೋರಿಸಿದೆ.

ಯುನೈಟೆಡ್ ಸ್ಟೇಟ್ಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್‌ಮೆಂಟ್(ಯುಎಸ್‌ಐಐಡಿ) ನೊಂದಿಗೆ ಕೆಲಸ ಮಾಡುವ ಗುತ್ತಿಗೆದಾರರು ಮತ್ತು ಪಾಲುದಾರರು ಪೂರೈಕೆ ತಕ್ಷಣವೇ ನಿಲ್ಲಿಸಲು ಅಂತಹ ಜ್ಞಾಪಕ ಪತ್ರಗಳನ್ನು ಸ್ವೀಕರಿಸಲು ಪ್ರಾರಂಭಿಸಿದ್ದಾರೆ. ಜನವರಿ 20 ರಂದು ಟ್ರಂಪ್ ಅಧಿಕಾರ ವಹಿಸಿಕೊಂಡಾಗಿನಿಂದ ಜಾರಿಗೆ ಬಂದಿರುವ ಯುಎಸ್ ನೆರವು ಮತ್ತು ನಿಧಿಯ ಮೇಲಿನ ವ್ಯಾಪಕ ಸ್ಥಗಿತಗೊಳಿಸುವಿಕೆಯ ಭಾಗವಾಗಿದೆ ಎನ್ನಲಾಗಿದೆ.

ಹೆಚ್‌ಐವಿ, ಮಲೇರಿಯಾ ಮತ್ತು ಕ್ಷಯರೋಗ ಹಾಗೂ ಗರ್ಭನಿರೋಧಕ ಮತ್ತು ತಾಯಿಯ ಮತ್ತು ಮಕ್ಕಳ ಆರೋಗ್ಯ ಸರಬರಾಜುಗಳ ಕುರಿತು ಸಂಸ್ಥೆಯ ಕೆಲಸವನ್ನು ಈ ಜ್ಞಾಪಕ ಪತ್ರವು ಒಳಗೊಂಡಿದೆ ಎಂದು ಯುಎಸ್‌ಐಐಡಿ ಮೂಲ ಮತ್ತು ಒಬ್ಬ ಮಾಜಿ ಯುಎಸ್‌ಐಐಡಿ ಅಧಿಕಾರಿ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read