BREAKING: ಅ. 1 ರಿಂದ ಔಷಧ ಆಮದು ಮೇಲೆ ಶೇ. 100 ಸುಂಕ: ಟ್ರಂಪ್ ಘೋಷಣೆ

ವಾಷಿಂಗ್ಟನ್: ಅಕ್ಟೋಬರ್ 1, 2025 ರಿಂದ ಬ್ರಾಂಡೆಡ್ ಮತ್ತು ಪೇಟೆಂಟ್ ಪಡೆದ ಔಷಧಗಳ ಆಮದಿನ ಮೇಲೆ ಶೇಕಡಾ 100 ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಘೋಷಿಸಿದ್ದಾರೆ. ಇದರಿಂದ ಅಮೆರಿಕದೊಂದಿಗಿನ ವ್ಯಾಪಾರದ ಮೇಲೆ ಹೆಚ್ಚು ಅವಲಂಬಿತವಾದ ದೇಶೀಯ ಕೈಗಾರಿಕೆಗಳಲ್ಲಿ ಒಂದಾದ ಭಾರತದ ಔಷಧ ವಲಯವು ಈ ಕ್ರಮದಿಂದ ಗಮನಾರ್ಹವಾಗಿ ಪರಿಣಾಮ ಬೀರಬಹುದು.

ಕಂಪನಿಯು ಅಮೆರಿಕದಲ್ಲಿ ತನ್ನ ಔಷಧೀಯ ಉತ್ಪಾದನಾ ಘಟಕವನ್ನು ನಿರ್ಮಿಸದ ಹೊರತು ಅಕ್ಟೋಬರ್ 1, 2025 ರಿಂದ, ಯಾವುದೇ ಬ್ರಾಂಡ್ ಅಥವಾ ಪೇಟೆಂಟ್ ಪಡೆದ ಔಷಧೀಯ ಉತ್ಪನ್ನದ ಮೇಲೆ ನಾವು 100 ಪ್ರತಿಶತ ಸುಂಕ ವಿಧಿಸುತ್ತೇವೆ ಎಂದು ಟ್ರಂಪ್ ತಿಳಿಸಿದ್ದಾರೆ.

ತಮ್ಮ ಇತ್ತೀಚಿನ ಸುಂಕ ವಿಧಿಸುವಿಕೆಯಲ್ಲಿ ಟ್ರಂಪ್, ಅಡುಗೆ ಮನೆ ಕ್ಯಾಬಿನೆಟ್‌ಗಳು ಮತ್ತು ಸ್ನಾನಗೃಹದ ವ್ಯಾನಿಟಿಗಳ ಆಮದಿನ ಮೇಲೆ ಶೇ. 50, ಅಪ್ಹೋಲ್ಟರ್ಡ್ ಪೀಠೋಪಕರಣಗಳ ಮೇಲೆ ಶೇ. 30 ಮತ್ತು ಹೆವಿ ಟ್ರಕ್‌ಗಳ ಮೇಲೆ ಶೇ. 25 ರಷ್ಟು ಸುಂಕವನ್ನು ವಿಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read