ಮುಂಬೈ: ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇನಲ್ಲಿ ಬ್ರೇಕ್ ಫೇಲ್ ಆದ ನಂತರ ಟ್ರಕ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿದ್ದು ಟ್ರಕ್ ಕನಿಷ್ಠ 12 ವಾಹನಗಳಿಗೆ ಡಿಕ್ಕಿ ಹೊಡೆದು ಜಖಂ ಆಗಿವೆ.
ಮಹಾರಾಷ್ಟ್ರದ ಖೋಪೋಲಿ ಬಳಿ ನಡೆದ ಈ ಅಪಘಾತದಲ್ಲಿ ಸುಮಾರು ಏಳೆಂಟು ಕಾರುಗಳು ಒಂದಕ್ಕೊಂದು ಡಿಕ್ಕಿ ಹೊಡೆದವು. ರಸ್ತೆಯಲ್ಲಿ ಧ್ವಂಸಗೊಂಡ ಕಾರುಗಳು, ಗಾಯಗೊಂಡವರು ಆಂಬುಲೆನ್ಸ್ ಒಳಗೆ ಕುಳಿತಿರುವ ವಿಡಿಯೊವನ್ನು ಎಎನ್ಐ ಸುದ್ದಿ ಸಂಸ್ಥೆ ಟ್ವೀಟ್ ಮಾಡಿದೆ.
ಪ್ರಾಥಮಿಕವಾಗಿ, ಕಾರು ವೇಗವಾಗಿ ಬಂದಂತೆ ತೋರುತ್ತಿದೆ. ಅದು ಮೊದಲು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ನಂತರ ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಕಾರಿನಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
https://twitter.com/ANI/status/1651504954438455297?ref_src=twsrc%5Etfw%7Ctwcamp%5Etweetembed%7Ctwterm%5E1651504954438455297%7Ctwgr%5E2d9accce2b2dc6b0de85f28f5117fe12395d972a%7Ctwcon%5Es1_&ref_url=https%3A%2F%2Fwww.india.com%2Fmaharashtra%2Fvideo-truck-hits-12-cars-in-freak-accident-on-mumbai-pune-expressway-injured-6018874%2F