ಹೈದರಾಬಾದ್ : ‘ಗಣೇಶನ ಚತುರ್ಥಿ’ ಸಮೀಪಿಸುತ್ತಿದ್ದು, ಹಲವಾರು ಕಡೆ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಲು ಭರ್ಜರಿ ಸಿದ್ದತೆಗಳು ನಡೆಯುತ್ತಿದೆ.
ಹೈದರಾಬಾದ್‌ನಿಂದ ಗಣೇಶ ಮೂರ್ತಿಯನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಸೇತುವೆಯ ಕೆಳಗೆ ಸಿಲುಕಿಕೊಂಡ ಘಟನೆ ಬೆಳಕಿಗೆ ಬಂದಿದೆ. ಪಂಜಾಗುಟ್ಟ ಫ್ಲೈಓವರ್ ಬಳಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ. ಹೈದರಾಬಾದ್‌ನ ಪಂಜಾಗುಟ್ಟ ಛೇದಕದಲ್ಲಿ ಗಣೇಶ ಲಾರಿಯೊಂದು ಫ್ಲೈಓವರ್ ಅಡಿಯಲ್ಲಿ ಸಿಲುಕಿಕೊಂಡಿದೆ. ಖೈರತಾಬಾದ್‌ನಿಂದ ಅಮೀರ್ಪೇಟೆ ಕಡೆಗೆ ಹೋಗುತ್ತಿದ್ದ ಗಣೇಶ ಮೂರ್ತಿಯ ಲಾರಿಯೊಂದು ಫ್ಲೈಓವರ್ ಅಡಿಯಲ್ಲಿ ಸಿಲುಕಿಕೊಂಡಿದೆ. ವಿಗ್ರಹದ ಎತ್ತರದಿಂದಾಗಿ ಲಾರಿ ಫ್ಲೈಓವರ್ ಅಡಿಯಲ್ಲಿ ಹಾದುಹೋಗಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಪಂಜಾಗುಟ್ಟ ಛೇದಕದಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಯಿತು. ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸಂಚಾರವನ್ನು ತೆರವುಗೊಳಿಸಿದರು. ವಿಡಿಯೋ ಸದ್ಯ ವೈರಲ್ ಆಗಿದೆ.
A major traffic chaos was witnessed in #Hyderabad after a #GaneshIdol truck got stuck under the #Punjagutta flyover.
— BNN Channel (@Bavazir_network) August 24, 2025
According to reports, the truck was heading from #Khairatabad towards #Ameerpet when it got wedged under the flyover, blocking the traffic flow.
Police… pic.twitter.com/nvKzjdQfxT