ಬೆಂಗಳೂರಿನಲ್ಲಿ ಹಾಲು ಕಳ್ಳತನ: ನಾಲ್ವರು ಯುವಕರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ | Watch Video

ಬೆಂಗಳೂರಿನಲ್ಲಿ ವಿಚಿತ್ರ ರೀತಿಯ ಕಳ್ಳತನವೊಂದು ನಡೆಯುತ್ತಿದೆ. ಅಂಗಡಿಗಳ ಹೊರಗೆ ಇಟ್ಟಿದ್ದ ಹಾಲಿನ ಪ್ಯಾಕೆಟ್ ಗಳನ್ನು ಸ್ಕೂಟರ್ ನಲ್ಲಿ ಬಂದ ಯುವಕರು ಕದ್ದೊಯ್ಯುತ್ತಿದ್ದಾರೆ. ಇಂತಹ ಒಂದು ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಬೆಂಗಳೂರಿನ ಅಂಗಡಿಯೊಂದರ ಹೊರಗೆ ಇಟ್ಟಿದ್ದ ಹಾಲಿನ ಚೀಲಗಳನ್ನು ಸ್ಕೂಟರ್ ನಲ್ಲಿ ಬಂದ ನಾಲ್ವರು ಯುವಕರು ಕದ್ದೊಯ್ದಿದ್ದಾರೆ. ಅಂಗಡಿಯೊಳಗೆ ವೃದ್ಧ ಅಂಗಡಿಯವನು ಇದ್ದಾಗ ಈ ಘಟನೆ ನಡೆದಿದೆ. ಬೀದಿಯಲ್ಲಿ ಇಟ್ಟಿದ್ದ ಟ್ರೇಗಳಿಂದ ಕನಿಷ್ಠ 4 ಹಾಲಿನ ಪ್ಯಾಕೆಟ್ ಗಳನ್ನು ಕದ್ದೊಯ್ದು ಯುವಕರು ಪರಾರಿಯಾಗಿದ್ದಾರೆ.

ಸ್ಕೂಟರ್ ನಲ್ಲಿ ನಾಲ್ವರು ಯುವಕರು ಹೆಲ್ಮೆಟ್ ಇಲ್ಲದೆ ಬಂದಿದ್ದಾರೆ. ಅವರು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ, ಕಳ್ಳತನ ಮಾಡಿದ್ದಾರೆ. ಈ ಘಟನೆಯ ಸಿಸಿಟಿವಿ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಪೊಲೀಸರಿಗೆ ದೂರು ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ವಿಡಿಯೋದಲ್ಲಿ, ಸ್ಕೂಟರ್ ಅಂಗಡಿಯ ಬಳಿ ಬಂದು ಒಂದು ಸೆಕೆಂಡ್ ನಿಲ್ಲುತ್ತದೆ. ಸ್ಕೂಟರ್ ನಲ್ಲಿದ್ದ ಯುವಕರು ಹಾಲಿನ ಪ್ಯಾಕೆಟ್ ಗಳನ್ನು ತೆಗೆದುಕೊಂಡು ತಮ್ಮ ಬಟ್ಟೆಯೊಳಗೆ ಹಾಕಿಕೊಂಡು ಓಡಿಹೋಗುತ್ತಾರೆ. ಹಾಲಿನ ಪ್ಯಾಕೆಟ್ ಗಳನ್ನು ಕದ್ದೊಯ್ದ ನಂತರ ಅಂಗಡಿಯವನಿಗೆ ಕಳ್ಳತನದ ಬಗ್ಗೆ ತಿಳಿಯುತ್ತದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಯುವಕರನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದಾರೆ.

ಇದಕ್ಕೂ ಮುಂಚೆ, ಕೋಣನಕುಂಟೆ ಮೆಟ್ರೋ ನಿಲ್ದಾಣದ ಬಳಿ ಇದೇ ರೀತಿಯ ಘಟನೆ ನಡೆದಿತ್ತು. ಸ್ಕೂಟರ್ ನಲ್ಲಿ ಬಂದ ಕಳ್ಳರು ಹಾಲಿನ ಕ್ರೇಟ್ ಗಳನ್ನು ಕದ್ದೊಯ್ದಿದ್ದರು. ಅಂಗಡಿಯವರು ಬರುವ ಮುಂಚೆ ಹಾಲಿನ ಕ್ರೇಟ್ ಗಳನ್ನು ಕದ್ದೊಯ್ದಿದ್ದರು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read