ಮರದ ಕೊಂಬೆಯ ಮೇಲೆ ಕುಳಿತು ಅದೇ ಕೊಂಬೆಯನ್ನು ಕಡಿಯುತ್ತಿದ್ದ ವ್ಯಕ್ತಿಯೊಬ್ಬನ ಕಥೆಯನ್ನು ನೀವು ಸಣ್ಣವರಿದ್ದಾಗ ಕೇಳಿರ್ತೀರಿ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಕೂಡ ವ್ಯಕ್ತಿ ಅದೇ ಮೂರ್ಖತನವನ್ನು ಮಾಡಿದ್ದಾನೆ. ಆತ ಮಾಡಿದ ತಪ್ಪಿಗೆ ಆತನಿಗೆ ಅಲ್ಲಿಯೇ ಶಿಕ್ಷೆಯಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಒಂದು ವೈರಲ್ ಆಗಿದೆ. ಅದ್ರಲ್ಲಿ ಕಾಡಿನಲ್ಲಿರುವ ವ್ಯಕ್ತಿಯೊಬ್ಬ ಮರಕ್ಕೆ ಜೋರಾಗಿ ಒದೆಯುತ್ತಾನೆ. ಆ ಮರ ಮುರಿದು ಆತನ ತಲೆ ಮೇಲೆ ಬೀಳುತ್ತದೆ. ನೋವಿಗೆ ಅಲ್ಲಿಯೆ ಕೆಳಗೆ ಬಿದ್ದು ಒದ್ದಾಡುತ್ತಾನೆ ವ್ಯಕ್ತಿ.
ಈ ವಿಡಿಯೋ ನೋಡಿದ ಬಳಕೆದಾರರು ತ್ವರಿತ ಕರ್ಮ ಎಂದು ಕಮೆಂಟ್ ಮಾಡಿದ್ದಾರೆ. ಕ್ರಿಯೆ ಧನಾತ್ಮಕವಾಗಿರಲಿ ಇಲ್ಲ ಋಣಾತ್ಮಕವಾಗಿರಲಿ ಅಲ್ಲಿಯೇ ಪರಿಣಾಮ ಕಾಣಬಹುದು ಎಂದು ಕೆಲವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
https://twitter.com/newsforyou36351/status/1794304983929913488?ref_src=twsrc%5Etfw%7Ctwcamp%5Etweetembed%7Ctwterm%5E1794304983929913488%7Ctwgr%5E3fcf11de3b4e099c8ee24fe38d0a4275e5431d28%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fcatchnews-epaper-dh43cd57f3204c4cb3b293c5314a35a5d9%2Ftreestrikesbackmangetsinstantpayback-newsid-n627153938