BIG NEWS: ಮರಗಳಿಗೂ ಪಿಂಚಣಿ ಯೋಜನೆ ಆರಂಭ; 70 ವರ್ಷ ಮೇಲ್ಪಟ್ಟ ಮರಗಳಿಗೆ ವಾರ್ಷಿಕ 2,750 ರೂ ಸೌಲಭ್ಯ

ಚಂಡೀಗಢ: ಪಂಜಾಬ್, ಹರಿಯಾಣ ಭಾಗಗಳಲ್ಲಿ ಒಣಹುಲ್ಲುಗಳಿಗೆ ಬೆಂಕಿ ಹಚ್ಚುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ಇದರಿಂದಾಗಿ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದೆ. ಹುಲ್ಲುಗಾವಲಿಗೆ ಬೆಂಕಿ ಹಾಕುವುದರಿಂದ ಮರಗಳಿಗೂ ತೊಂದರೆಯಾಗುತ್ತಿದೆ. ಈ ಕ್ರಮವನ್ನು ತಡೆಗಟ್ಟಲು ಹರ್ಯಾಣ ಸರ್ಕಾರ ಇತ್ತೀಚೆಗೆ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು, ಮರಗಳಿಗೂ ಪಿಂಚಣಿ ಯೋಜನೆ ಜಾರಿ ಮಾಡಿದೆ.

ನವೆಂಬರ್ ನಿಂದ ಮರಗಳ ಪಿಂಚಣಿ ಯೋಜನೆ ಜಾರಿಗೆ ಬರಲಿದ್ದು, 70 ವರ್ಷ ಮೇಲ್ಪಟ್ಟ ಮರಗಳಿಗೆ ಪ್ರಾಣ ವಾಯು ದೇವತಾ ಪಿಂಚಣಿ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ. ಈ ಮೂಲಕ ಮರಗಳಿಗೆ ಪಿಂಚಣಿ ಯೋಜನೆ ಜಾರಿ ಮಾಡಿದ ಮೊದಲ ರಾಜ್ಯ ಎಂಬ ಖ್ಯಾತಿಗೂ ಹರ್ಯಾಣ ಪಾತ್ರವಾಗಿದೆ.

ಈ ಯೋಜನೆಗಾಗಿ ರಾಜ್ಯದಲ್ಲಿ 4 ಸಾವಿರ ಮರಗಳನ್ನು ಗುರುತಿಸಲಾಗಿದೆ. ಪಿಂಚಣಿ ಯೋಜನೆಯಡಿ ವಾರ್ಷಿಕ 2,750 ರೂ ನೀಡಲಾಗುವುದು ಎಂದು ಹರ್ಯಾಣ ಪರಿಸರ ಮತ್ತು ಅರಣ್ಯ ಸಚಿವ ಕನ್ವರ್ಪಾಲ್ ಗುರ್ಜರ್ ತಿಳಿಸಿದ್ದಾರೆ.

ಹರ್ಯಾಣ ಸರ್ಕಾರ ಆರಂಭಿಸಿರುವ ಪ್ರಾಣ ವಾಯು ದೇವತಾ ಪಿಂಚಣಿ (ಟ್ರೀ ಪೆನ್ಶನ್) ಯೋಜನೆ ಒಂದು ವಿನೂತನ ಯೋಜನೆಯಾಗಿದ್ದು, ದೇಶದ ಇತರ ರಾಜ್ಯಗಳಿಗೂ ಮಾದರಿಯಾಗಿದೆ. ಪರಿಸರ ಸಂರಕ್ಷಣೆ ದೃಷ್ಟಿಯಿಂದ ಈ ಯೋಜನೆ ಬಹಳ ಮುಖ್ಯವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಪ್ರಾಣ ವಾಯು ದೇವತಾ ಪಿಂಚಣಿ ಯೋಜನೆ ಪ್ರಕಾರ ಯಾವ ಮನೆಯ ವ್ಯಾಪ್ತಿಯಲ್ಲಿ 70 ವರ್ಷ ಮೇಲ್ಪಟ್ಟ ಮರಗಳಿವೆಯೋ ಆ ಮನೆಯ ಮಾಲೀಕನಿಗೆ ಈ ಪಿಂಚಣಿ ಯೋಜನೆಯ ಹಣ ಸಿಗಲಿದೆ. ಒಂದು ವೇಳೆ ಗ್ರಾಮದ ಸರ್ಕಾರಿ ಜಾಗದಲ್ಲಿ ಮರವಿದ್ದರೆ ಯೋಜನೆಯ ಲಾಭ ಗ್ರಾಮ ಪಂಚಾಯಿತಿಗೆ ಸಿಗಲಿದೆ. ಜಮೀನಿನಲ್ಲಿ 70 ವರ್ಷ ಹಳೆಯ ಮರವಿದ್ದರೆ ಅದರ ಲಾಭ ರೈತನಿಗೆ ಸಿಗಲಿದೆ. ನಗರದಲ್ಲಿ ಮರವಿದ್ದರೆ ಸ್ಥಳೀಯ ಆಡಳಿತಕ್ಕೆ ಮರದ ಪಿಂಚಣಿ ಲಾಭ ಸಿಗಲಿದೆ. ಅರಣ್ಯ ಪ್ರದೆಶದಲ್ಲಿ 70 ವರ್ಷಕ್ಕಿಂತ ಮೇಲ್ಪಟ್ಟ ಮರಗಳಿದ್ದರೆ ಪಿಂಚಣಿ ಲಾಭ ಅರಣ್ಯ ಇಲಾಖೆಗೆ ಸಿಗಲಿದೆ ಎಂದು ವಿವರಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read