ಬೆಂಗಳೂರು: ಸಾರಿಗೆ ನೌಕರರು ಮುಷ್ಕರ ಹಿಂಪಡೆದಿದ್ದು, ಈ ಬಗ್ಗೆ ಹೈಕೋರ್ಟ್ ಗೆ ಜಂಟಿ ಕ್ರಿಯಾ ಸಮಿತಿ ಪ್ರಮಾಣಪತ್ರ ಸಲ್ಲಿಕೆ ಮಾಡಿದೆ.
ಹೈಕೋರ್ಟ್ ಆದೇಶವನ್ನು ಗೌರವಿಸಿ ಸಾರಿಗೆ ನೌಕರರ ಮುಷ್ಕರ ವಾಪಸ್ ಪಡೆಯಲು ಸಾರಿಗೆ ನೌಕರರ ಸಂಘಟನೆಗಳು ನಿರ್ಣಯ ಅಂಗೀಕರಿಸಿವೆ. ತಕ್ಷಣದಿಂದಲೇ ಮುಷ್ಕರ ಹಿಂಪಡೆದಿರುವುದಾಗಿ ಪ್ರಮಾಣ ಪತ್ರ ಸಲ್ಲಿಕೆ ಮಾಡಲಾಗಿದೆ.
ಪರಿಸ್ಥಿತಿ ಸಹಜ ಸ್ಥಿತಿಗೆ ಮರಾಳಿರುವುದನ್ನು ಪರಿಗಣಿಸಿ ಪಿಐಎಲ್ ಇತ್ಯರ್ಥಗೊಳಿಸಿ ಸಿಜೆ ವಿಭು ಬಖ್ರು, ನ್ಯಾ.ಜೋಶಿ ಅವರಿದ್ದ ಪೀಠ ಆದೇಶ ಹೊರಡಿಸಿದೆ. ಕಾಲಮಿತಿಯೊಳಕೆ ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಲು ನಿರ್ದೇಶನ ನೀಡುವಂತೆ ಸಾರಿಗೆ ನೌಕರರ ಪರ ವಕೀಲರು ಮನವಿ ಮಾಡಿದ್ದಾರೆ. ಸರ್ಕಾರ ಹಾಗೂ ಕಾಅರ್ಮಿಕ ಸಂಘಟನೆಗಳ ಸಂಧಾನ ಮುಂದುವರೆಸಲಿ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.