ಟ್ರಾನ್ಸ್​ಜೆಂಡರ್​ ಅಮ್ಮನಿಂದ ಮಗಳ ಕನ್ಯಾದಾನ; ನೆರೆದವರು ಭಾವುಕ

ಮದುವೆ ಪ್ರತಿಯೊಬ್ಬರ ಜೀವನದಲ್ಲಿ ಒಂದು ವಿಶೇಷ ದಿನ. ಹರಿಯಾಣದಲ್ಲಿ ತಾಯಿಯೊಬ್ಬಳು ತನ್ನ ಮಗಳ ಕನ್ಯಾದಾನವನ್ನು ಮಾಡಿದ್ದು, ಇದನ್ನು ಕಂಡು ಜನರು ಭಾವುಕರಾಗಿದ್ದಾರೆ.

ಇದಕ್ಕೆ ಕಾರಣವೂ ಇದೆ. ಅದೇನೆಂದರೆ ಕನ್ಯಾದಾನ ಮಾಡಿದ ಅಮ್ಮ ಲೈಂಗಿಕ ಅಲ್ಪಸಂಖ್ಯಾತಳು. ಈಕೆ ಬಾಲ್ಯದಿಂದಲೂ ಜನ್ನತ್ ಎಂಬ ಹುಡುಗಿಯನ್ನು ಸಲಹುತ್ತಿದ್ದಳು, ಆಕೆಯ ಮದುವೆ ಮಾಡಿದ್ದಾರೆ. ಮದುವೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡ ಈ ಅಮ್ಮನ ಕನ್ಯಾದಾನ ಅಲ್ಲಿದ್ದವರ ಹೃದಯ ಕಲುಕಿದೆ.

ಮಗಳ ಮದುವೆ ಇಷ್ಟೊಂದು ಸಡಗರದಿಂದ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ ಎಂದ ಈ ಅಮ್ಮ, ಮಗಳನ್ನು ತಬ್ಬಿಕೊಂಡು ಅಳಲು ಪ್ರಾರಂಭಿಸಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಜನ್ನತ್ ಬಾಲ್ಯದಿಂದಲೂ ತನ್ನೊಂದಿಗೆ ವಾಸಿಸುತ್ತಿದ್ದಳು ಎಂದು ಟ್ರಾನ್ಸ್​ಜೆಂಡರ್​ ಮಹಿಳೆ ಹೇಳಿಕೊಂಡಿದ್ದಾರೆ.

ಇದು ಮೊದಲ ಬಾರಿಗೆ ಅಲ್ಲ, ಈ ಹಿಂದೆ ಟ್ರಾನ್ಸ್ಜೆಂಡರ್ ಸಮುದಾಯವು ಮತ್ತೊಂದು ವಿಶಿಷ್ಟ ಉಪಕ್ರಮವನ್ನು ತೆಗೆದುಕೊಂಡಿತ್ತು. ಬಡ ಕುಟುಂಬದ ಐದು ಹಿಂದೂ ಮತ್ತು ಮುಸ್ಲಿಂ ಹೆಣ್ಣುಮಕ್ಕಳ ಮದುವೆಯ ಜವಾಬ್ದಾರಿಯನ್ನು ಅವರು ತೆಗೆದುಕೊಂಡಿದ್ದರು.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read