BREAKING : ರಾಜ್ಯದ ‘ಆರೋಗ್ಯ ಇಲಾಖೆ’ ವೈದ್ಯಾಧಿಕಾರಿ, ಸಿಬ್ಬಂದಿಗಳ ವರ್ಗಾವಣೆ : ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : ರಾಜ್ಯದ ಆರೋಗ್ಯ ಇಲಾಖೆ ಸಿಬ್ಬಂದಿಗಳ ವರ್ಗಾವಣೆ ಕುರಿತು ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ ಹೊರಡಿಸಿದೆ. ಕರ್ನಾಟಕ ನಾಗರೀಕ ಸೇವಾ (ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ಕಾಯ್ದೆ, 2011 ಹಾಗೂ ಅದರಡಿ ರಚಿಸಲಾದ ನಿಯಮಾವಳಿ, 2011 ಹಾಗೂ ಕಾಲಕಾಲಕ್ಕೆ ಮಾಡಲಾದ ತಿದ್ದುಪಡಿ ನಿಯಮಾವಳಿಯಂತೆ ಗ್ರೂಪ್-ಎ ವೃಂದದ ಹಿರಿಯ ತಜ್ಞರು, ತಜ್ಞರು, ಉಪ ಮುಖ್ಯ ವೈದ್ಯಾಧಿಕಾರಿ/ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ/ಮುಖ್ಯ ದಂತ ಆರೋಗ್ಯಾಧಿಕಾರಿ/ಹಿರಿಯ ದಂತ ಆರೋಗ್ಯಾಧಿಕಾರಿ/ದಂತ ಆರೋಗ್ಯಾಧಿಕಾರಿ ಮತ್ತು ಗ್ರೂಪ್-ಬಿ, ಸಿ ಮತ್ತು ಡಿ ವೃಂದದ ಸಿಬ್ಬಂದಿಗಳ ವರ್ಗಾವಣೆಯನ್ನು ಸಮಾಲೋಚನೆಯ ಮೂಲಕ ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಆದುದರಿಂದ ಇಲಾಖೆಯ ವೈದ್ಯಾಧಿಕಾರಿ ಮತ್ತು ಇತರೆ ಸಿಬ್ಬಂದಿಗಳ ವರ್ಗಾವಣೆಯನ್ನು ಸಮಾಲೋಚನೆ ಮೂಲಕ ಕೈಗೊಂಡು, ಪ್ರಕ್ರಿಯೆಯನ್ನು ದಿನಾಂಕ: 15/06/2025ರೊಳಗಾಗಿ ಪೂರ್ಣಗೊಳಿಸಲು ಸಕ್ಷಮ ಪ್ರಾಧಿಕಾರಗಳಿಗೆ ಅನುಮತಿ ನೀಡುವಂತ ಕೋರಿರುತ್ತಾರೆ. ಮೇಲ್ಕಂಡ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದ್ದು, ಈ ಕೆಳಕಂಡಂತ ಅದೇಶಿಸಿದೆ.

ಪ್ರಸ್ತಾವನೆಯಲ್ಲಿ ವಿವರಿಸಲಾದ ಅಂಶಗಳ ಹಿನ್ನೆಲೆಯಲ್ಲಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಇಲಾಖೆಗೆ ಸಂಬಂಧಿಸಿದಂತೆ ‘ಕರ್ನಾಟಕ ನಾಗರೀಕ ಸೇವಾ (ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿ ವರ್ಗಾವಣೆ ನಿಯಂತ್ರಣ) ನಿಯಮಗಳು, 2011’ರ ನಿಯಮ-3ರ ಕೋಷ್ಠಕ (1) ಮತ್ತು (ii)ಗಳಲ್ಲಿನ ಹುದ್ದೆಗಳ ಎದುರು ನಮೂದಿಸಿರುವ ಸಕ್ಷಮ ಪ್ರಾಧಿಕಾರಗಳು, ಇಲಾಖೆಯ ವರ್ಗಾವಣಾ ಕಾಯ್ದೆ ಹಾಗೂ ನಿಯಮಾವಳಿ ಹಾಗೂ ಕಾಲಕಾಲದ ತಿದ್ದುಪಡಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಡಿಸಿ, ಈ ಕೆಳಗಿನ ವೇಳಾ ಪಟ್ಟಿಯಂತೆ ವರ್ಗಾವಣೆಯನ್ನು ನಿಯಮಾವಳಿಯ ನಿಯಮ-7ರಂತೆ ಗಣಕೀಕೃತ ಕೌನ್ಸಿಲಿಂಗ್ ಮೂಲಕ ಕೈಗೊಳ್ಳಲು ಆದೇಶಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read