BIG NEWS: ಪೊಲೀಸ್ ಸಿಬ್ಬಂದಿಯಿಂದಲೇ ರೈಲಿನಲ್ಲಿ ಕಳ್ಳತನ; ಹೆಡ್ ಕಾನ್ಸ್ ಟೇಬಲ್ ಅರೆಸ್ಟ್

ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದ ಘಟನೆಯಿದು…. ಕಳ್ಳರನ್ನು ಹಿಡಿಯಬೇಕಿದ್ದ ಪೊಲಿಸರೇ ಕಳ್ಳತನಕ್ಕಿಳಿದರೆ ಜನರನ್ನು ರಕ್ಷಿಸುವವರು ಯಾರು? ಇಂತದ್ದೇ ಘಟನೆ ಬೆಂಗಳೂರಿನ ಬೈಯ್ಯಪ್ಪನಹಳ್ಳಿಯ ವ್ಯಾಪ್ತಿಯಲ್ಲಿ ನಡೆದಿದೆ.

ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದ ಹೆಡ್ ಕಾನ್ಸ್ ಟೇಬಲ್ ಓರ್ವನನ್ನು ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಿದ್ದರಾಮರೆಡ್ಡಿ ಬಂಧಿತ ಆರೋಪಿ. ಸಿದ್ದರಾಮಯರೆಡ್ಡಿ ಚಿಕ್ಕಬಳ್ಳಾಪುರ ರೈಲ್ವೆ ಹೊರ ಠಾಣೆಯ ಹೆಡ್ ಕಾನ್ಸ್ ಟೇಬಲ್ ಆಗಿದ್ದ. ಬೆಳಿಗ್ಗೆ ಪೊಲೀಸ್ ಡ್ಯೂಟಿ, ರಾತ್ರಿ ವೇಳೆ ಕಳ್ಳತನವೇ ಕಾಯಕವನ್ನಾಗಿ ಮಾಡಿಕೊಂಡಿದ್ದ.

ಕೇರಳ, ತಮಿಳುನಾಡು ಪ್ರಯಾಣಿಕರನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಎನ್ನಲಾಗಿದೆ. ಸದ್ಯ ಆರೋಪಿ ಸಿದ್ದರಾಮರೆಡ್ಡಿಯನ್ನು ಬಂಧಿಸಲಾಗಿದ್ದು, ಘಟನೆ ಬೆನ್ನಲ್ಲೇ ಪೊಲೀಸ್ ಹುದ್ದೆಯಿಂದ ಅಮಾನತುಗೊಳಿಸಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read