BIG NEWS: ವಿಜಯಪುರದ ಬಳಿ ಹಳಿ ತಪ್ಪಿದ ರೈಲು: ಕೆಲ ರೈಲುಗಳ ಸಂಚಾರ ರದ್ದು

ವಿಜಯಪುರ: ವಿಜಯಪುರದ ಭೀಮಾ ನದಿ ಸೇತುವೆ ಬಳಿ ಲೋಕೋ ರೈಲು ಹಳಿತಪ್ಪಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.

ರೈಲು ಹಳಿ ತಪ್ಪಿದ ಪರಿಣಾಮ ಈ ಭಾಗದ ಕೆಲ ರೈಲು ಸಂಚಾರ ರದ್ದು ಮಾಡಲಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ವಿಜಯಪುರದಿಂದ ಕಲಬುರಗಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ.

ರೈಲು ಹಳಿತಪ್ಪಿರುವ ಹಿನ್ನೆಲೆಯಲ್ಲಿ ಕೆಲ ರೈಲು ಸಂಚರ ರದ್ದಾಗಿದೆ. ಮೈಸೂರು-ಪಂಢರಪುರ ನಡುವಿನ ರೈಲು ಸಂಖ್ಯೆ 16535 ರೈಲನ್ನು ಇಂದು ರದ್ದು ಮಾಡಲಾಗಿದೆ.

ಫಂಡರಪುರ-ಮೈಸೂರು ನಡುವುನ ರೈಲು ಸಂಖ್ಯೆ 16536 ಸೆ.6ರ ಸಂಚಾರ ಪಂಢರಾಪುರ-ವಿಜಯಪುರ ನಡುವೆ ಭಾಗಶ: ರದ್ದಾಗಲಿದೆ ಎಂದು ತಿಳಿದುಬಂದಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read