ತುಮಕೂರು : ಕುಣಿಗಲ್ ನಲ್ಲಿರುವ ಮಾರ್ಕೊನಹಳ್ಳಿ ಡ್ಯಾಂ ನಲ್ಲಿ ಘೋರ ದುರಂತ ಸಂಭವಿಸಿದ್ದು, 6 ಮಂದಿ ನೀರುಪಾಲಾಗಿದ್ದಾರೆ.
15 ಮಂದಿ ಮಾಗಡಿ ಪಾಳ್ಯದಲ್ಲಿರುವ ಅಮೃತೂರು ಠಾಣೆ ಎಎಸ್ ಐ ಜಿಲಾನಿ ಅವರ ಮನೆಗೆ ಬಂದಿದ್ದರು. ಬಳಿಕ ಅವರ ಮನೆಯಿಂದ ಮಾರ್ಕೊನಹಳ್ಳಿ ಡ್ಯಾಂಗೆ ತೆರಳಿದ್ದರು . ನೀರಿಗೆ ಇಳಿದು 12 ಜನ ಆಟ ಆಡುತ್ತಿದ್ದರು. 12 ಮಂದಿ ಪೈಕಿ 6 ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.
ಮೃತರನ್ನು ತಬಸಮ್ (42) ಮಿಶ್ರಾ (4) ಶಬಾನಾ (44) ಶಾಜಿಯಾ (25) ಅರ್ಬಿನ್ (30) ಮಹಿಬ್ ಎಂದು ಗುರುತಿಸಲಾಗಿದೆ. ಸದ್ಯ ಇಬ್ಬರ ಶವ ಪತ್ತೆಯಾಗಿದ್ದು, ಉಳಿದವರಿಗೆ ಶೋಧ ಕಾರ್ಯ ಮುಂದುವರೆಸಲಾಗಿದೆ.