ಬೆಳಗಾವಿ : ಬೆಳಗಾವಿಯಲ್ಲಿ ಘೋರ ದುರಂತ ಸಂಭವಿಸಿದ್ದು, ಕೃಷಿ ಹೊಂಡದಲ್ಲಿ ಮುಳುಗಿ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ.
ಹೌದು. ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಜಮೀನಿನಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಪೃಥ್ವಿರಾಜ್ ಕೆರಬಾ (13), ಅಥರ್ವ ಸೌಂದಲಗೆ (15), ಸಮರ್ಥ ಗಡಕರಿ (13) ಎಂದು ಗುರುತಿಸಲಾಗಿದೆ.
ಈಜು ಬಾರದೇ ಇದ್ದರೂ ಮಕ್ಕಳು ಸೈಕಲ್ ತೆಗೆದುಕೊಂಡು ಊರ ಹೊರಗಿನ ಕೃಷಿ ಹೊಂಡಕ್ಕೆ ಹೋಗಿದ್ದಾರೆ. ಮೂವರು ಮಕ್ಕಳಿಗೆ ಈಜಲು ಬರುತ್ತಿರಲಿಲ್ಲ, ಆದರೂ ಕೂಡ ನೀರಿಗೆ ಇಳಿದಿದ್ದಾರೆ. ಈ ಸಂಬಂಧ ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You Might Also Like
TAGGED:ಬೆಳಗಾವಿಯಲ್ಲಿ ಘೋರ ದುರಂತ