ಬಾಗಲಕೋಟೆ: ಗೆಳೆಯರೊಂದಿಗೆ ನದಿಯಲ್ಲಿ ಮೀನು ಹಿಡಿಯಲು ಹೋದ ವೇಳೆ ಯುವಕನೊಬ್ಬ ಮೊಸಳೆ ಬಾಲ ಬಡಿದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಬಾಗಲಕೋಟೆ ಜಿಲ್ಲೆ ಕಲಾದಗಿಯ ಶಾರದಾಳ ಗ್ರಾಮದ ಘಟಪ್ರಭಾ ನದಿ ಪಾತ್ರದಲ್ಲಿ ಶನಿವಾರ ಘಟನೆ ನಡೆದಿದೆ. ಬೀಳಗಿ ತಾಲೂಕಿನ ಸುನಗ ಗ್ರಾಮದ ವಿಜಯ ಶಿವಪ್ಪ ಲಮಾಣಿ(22) ಮೃತಪಟ್ಟ ಯುವಕ. ಶನಿವಾರ ಮಧ್ಯಾಹ್ನ ಘಟಪ್ರಭಾ ನದಿಯಲ್ಲಿ ಗೆಳೆಯರೊಂದಿಗೆ ಮೀನು ಹಿಡಿಯಲು ಹೋಗಿದ್ದ ವೇಳೆ ಮೊಸಳೆ ಬಾಲ ಬಡಿದು ನೀರಿನಲ್ಲಿ ಮುಳುಗಿ ವಿಜಯ ಮೃತಪಟ್ಟಿದ್ದಾನೆ.