BREAKING : ಬೆಂಗಳೂರಿನ ಈ ರಸ್ತೆಗಳಲ್ಲಿ ನಾಳೆ ವಾಹನ ಸಂಚಾರ ನಿರ್ಬಂಧ, ಇಲ್ಲಿದೆ ಪರ್ಯಾಯ ಮಾರ್ಗ

ಬೆಂಗಳೂರು : ಬೆಂಗಳೂರಿನ ಈ ರಸ್ತೆಗಳಲ್ಲಿ ನಾಳೆ ಸಂಚಾರ ನಿರ್ಬಂಧಿಸಲಾಗಿದೆ ಎಂದು ಬೆಂಗಳೂರಿನ ಸಂಚಾರಿ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ.

ಸದಾಶಿವನಗರ ಸಂಚಾರ ಪೊಲೀಸ್ ಠಾಣಾ ಸರಹದ್ದಿನ ಅರಮನೆ ಮೈದಾನದ ಕೃಷ್ಣವಿಹಾರ ಗೇಟ್ ನಂ-01, ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ದಿನಾಂಕ 28.11.2025 ರಂದು ಬೆಳಿಗ್ಗೆ 07:00 ಗಂಟೆಯಿಂದ ಸಂಜೆ 04:00 ಗಂಟೆಯವರೆಗೆ ಐಸಿಡಿಎಸ್ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ.

ಈ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯಮಂತ್ರಿಗಳು, ಕೇಂದ್ರ ಸರ್ಕಾರದ/ರಾಜ್ಯ ಸರ್ಕಾರದ ಕ್ಯಾಬಿನೆಟ್ ದರ್ಜೆ ಸಚಿವರು, ಇತರೆ ಗಣ್ಯವ್ಯಕ್ತಿಗಳು ಸೇರಿದಂತೆ ಅಂದಾಜು 40,000 ಸಾರ್ವಜನಿಕರು ಹಾಗೂ 959 ವಾಹನಗಳು ಬರುವ ನಿರೀಕ್ಷೆ ಇರುತ್ತದೆ.

ಕಾರ್ಯಕ್ರಮ ನಡೆಯುವ ಸ್ಥಳವಾದ ಅರಮನೆ ಮೈದಾನದ ಕೃಷ್ಣವಿಹಾರ ಗೇಟ್ ಹಾಗೂ ಬಳ್ಳಾರಿ ರಸ್ತೆ, ಸಿ ವಿ ರಾಮನ್ ರಸ್ತೆ, ಜಯಮಹಲ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಂಭವವಿರುವುದರಿಂದ ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ದಿನಾಂಕ:28.11.20025 ರಂದು ಬಳ್ಳಾರಿ ರಸ್ತೆಯಲ್ಲಿ ಈ ಕೆಳಕಂಡ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದೆ.

  1. ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೋಗುವ ಸಾರ್ವಜನಿಕರು/ವಾಹನ ಚಾಲಕರು ಓಲ್ಡ್ ಹೈಗೌಂಡ ಜಂಕ್ಷನ್ -ಕಲ್ಪನಾ ಜಂಕ್ಷನ್ – ಓಲ್ಡ್ ಉದಯ ಟಿವಿ ಜಂಕ್ಷನ್- ಕಂಟೋನ್ಸೆಂಟ್ ರೈಲ್ವೇ ಸ್ಟೇಷನ್ ಟ್ಯಾನರಿ ರಸ್ತೆ- ನಾಗಾವರ ಮೂಲಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೋಗುವುದು.
  2. ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಯಿಂದ ನಗರದ ಕೇಂದ್ರ ಭಾಗದ ಕಡೆಗೆ ಹೋಗುವ ಸಾರ್ವಜನಿಕರು/ವಾಹನ ಚಾಲಕರು ಹೆಬ್ಬಾಳದಲ್ಲಿ ಎಡತಿರುವು ಪಡೆದು ನಾಗಾವರ ಜಂಕ್ಷನ್ ನಲ್ಲಿ ಬಲತಿರುವು ಪಡೆದು ಬಂಬು ಬಜಾರ್ ಕ್ಲೀನ್ಸ್ ರೋಡ ಮುಖಾಂತರ ಸಿಟಿ ಕಡೆಗೆ ಹೋಗುವುದು./ಹೆಬ್ಬಾಳ ರಿಂಗ್ ರಸ್ತೆ-ಕುವೆಂಪು ಸರ್ಕಲ್ -ಗೊರಗುಂಟೆ ಪಾಳ್ಯ ಜಂಕ್ಷನ ನಲ್ಲಿ ಎಡ ತಿರುವು ಪಡೆದು ಡಾ. ರಾಜ್ ಕುಮಾರ್ ರಸ್ತೆ ಮೂಲಕ ನಗರದ ಕಡೆ ಹೋಗಬಹುದು.
  3. ಯಶವಂತಪುರ ಕಡೆಯಿಂದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಹೋಗುವವರು ಮತ್ತಿಕೆರೆ ರಸ್ತೆ ಮೂಲಕ ಬಿ ಇ ಎಲ್ ವೃತ್ತದಲ್ಲಿ ಬಲತಿರುವು ಪಡೆದು ರಿಂಗ್ ರೋಡ್ ಮೂಲಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವುದು.
  4. ಯಶವಂತಪುರ ಕಡೆಯಿಂದ ಸಿಟಿ ಕಡೆಗೆ ಹೋಗುವವರು ಡಾ. ರಾಜ್ ಕುಮಾರ್ ರಸ್ತೆ ಮೂಲಕ ಸಿಟಿ ಕಡೆಗೆ ಹೋಗುವುದು.
    ಭಾರೀ ವಾಹನಗಳ ಸಂಚಾರ ನಿರ್ಬಂಧ ಹಾಗೂ ಪರ್ಯಾಯ ಮಾರ್ಗ :
  5. ಹೆಬ್ಬಾಳ ಜಂಕ್ಷನ್: ಹೆಬ್ಬಾಳ ಕಡೆಯಿಂದ ಬರುವ ಬಾರೀ ವಾಹನಗಳನ್ನು ಬಳ್ಳಾರಿ ರಸ್ತೆಯ ಕಡೆ ಕಳುಹಿಸದೇ ಔಟರ್ ರಿಂಗ್ ರೋಡ್ ನಲ್ಲಿ ಚಲಿಸುವುದು.
  6. ಓಲ್ಡ್ ಹೈಗೌಂಡ್ಸ್ ಪಿ.ಎಸ್ ಜಂಕ್ಷನ್ : ಹೈಗೌಂಡ್ ಕಡೆಯಿಂದ ಬರುವ ವಾಹನಗಳನ್ನು ಕಲ್ಪನಾ
    ಜಂಕ್ಷನ್ – ಓಲ್ಡ್ ಉದಯ ಟಿವಿ ಜಂಕ್ಷನ್- ಕಂಟೋನ್ಸೆಂಟ್ ರೈಲ್ವೇ ಸ್ಟೇಷನ್ – ಟ್ಯಾನರಿ ರಸ್ತೆ-ನಾಗಾವರ ಕಡೆ ಚಲಿಸುವುದು.
  7. ಯಶವಂತಪುರ ಕಡೆಯಿಂದ ಸಿ.ವಿ ರಾಮನ್ ರಸ್ತೆಯ ಕಡೆ ಭಾರೀ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
    ವಾಹನ ನಿಲುಗಡೆ ನಿಷೇಧಿಸಿರುವ ರಸ್ತೆಗಳು :
    ಪ್ಯಾಲೇಸ್ ರಸ್ತೆ
    ನಂದಿದುರ್ಗ ರಸ್ತೆ
    ಬಳ್ಳಾರಿ ರಸ್ತೆ
    ಸಿ ವಿ ರಾಮನ್ ರೋಡ
    ಜಯಮಹಲ್ ರಸ್ತೆ
    ಗುಟ್ಟಹಳ್ಳಿ ರಸ್ತೆ
Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read