ಇನ್ನೋವಾ ಕ್ರಿಸ್ಟಾ ಟಾಪ್-ಎಂಡ್ ಮಾಡೆಲ್‌ ಬೆಲೆ ಬಹಿರಂಗ…..!

ಇನ್ನೋವಾ ಕ್ರಿಸ್ಟಾ VX ಮತ್ತು ZX ಅವತಾರಗಳ ಬೆಲೆಗಳನ್ನು ಟೊಯೋಟಾ ಬಿಡುಗಡೆ ಮಾಡಿದೆ. G, GX, VX, ಹಾಗೂ ZX ಅವತಾರಗಳಲ್ಲಿ ಬರುವ ಇನ್ನೋವಾ ಕ್ರಿಸ್ಟಾ ಎಂಪಿವಿಗಳ ಬೆಲೆ 19.13 ಲಕ್ಷ ರೂ.ನಿಂದ 25.43 ಲಕ್ಷ ರೂ. ಗಳ ವರೆಗೆ ಇದೆ.

8 ಇಂಚಿನ ಟಚ್‌ ಸ್ಕ್ರೀನ್‌ ಘಟಕ, ಪವರ‍್ಡ್‌ ಚಾಲಕನ ಆಸನ, ಮುಂಬದಿ ಹಾಗೂ ಹಿಂಬದಿ ಪಾರ್ಕಿಂಗ್ ಸೆನ್ಸಾರ್‌ಗಳು ಮತ್ತು ಏಳು ಏರ್‌ ಬ್ಯಾಗ್‌ಗಳ ಸವಲತ್ತುಗಳು ಈ ವಾಹನದಲ್ಲಿವೆ. 150ಪಿಎಸ್‌ 2.4ಲೀ ಡೀಸೆಲ್ ಎಂಜಿನ್‌ ಹಾಗೂ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಶನ್ ಮೂಲಕ ಈ ವಾಹನಗಳು ಶಕ್ತಿ ಪಡೆಯುತ್ತವೆ.

ಕ್ರಿಸ್ಟಾ ಕಾರುಗಳ ಬೆಲೆಗಳು ಇಂತಿವೆ:

ಜಿ 7-ಸೀಟರ್‌‌ 19.13 ಲಕ್ಷ ರೂ.

ಜಿ 8-ಸೀಟರ್‌ 19.18 ಲಕ್ಷ ರೂ.

ಜಿಎಕ್ಸ್‌ 7 ಮತ್ತು 8 ಸೀಟರ್‌ 19.99 ಲಕ್ಷ ರೂ.

ವಿಎಕ್ಸ್ 7 ಸೀಟರ್‌ 23.84 ಲಕ್ಷ ರೂ.

ವಿಎಕ್ಸ್‌ 8 ಸೀಟರ್‌ 23.84 ಲಕ್ಷ ರೂ.

ಜ಼ಡ್‌ಎಕ್ಸ್ 7 ಸೀಟರ್‌‌ 25.43 ಲಕ್ಷ ರೂ.

ಸ್ವಯಂ ಚಾಲಿತ ಎಸಿ, 8-ವೇ ಎಲೆಕ್ಟ್ರಿಕಲಿ ಅಡ್ಜಸ್ಟಬಲ್ ಚಾಲಕನ ಆಸನ, ಲೆದರ್‌ ಸೀಟುಗಳು, ಒನ್ ಟಚ್‌ ಟಂಬಲ್ ಎರಡನೇ ಸಾಲಿನ ಸೀಟುಗಳು, ಇನ್ಫೋಟೇನ್ಮೆಂಟ್ ವ್ಯವಸ್ಥೆ, ವಾಹನದ ಸ್ಥಿರತೆ ನಿಯಂತ್ರಣ, ಹಿಲ್ ಸ್ಟಾರ್ಟ್ ಅಸಿಸ್ಟ್‌ಗಳು ಕ್ರಿಸ್ಟಾದ ಆಸಕ್ತಿಕರ ಫೀಚರ್‌ಗಳಾಗಿವೆ.

ಇದೇ ವೇಳೆ, ಟೊಯೋಟಾದ ಹೊಸ ವಾಹನ ಹೈಕ್ರಾಸ್‌ನ ಮಾಡೆಲ್‌ಗಳು 18.55 ಲಕ್ಷ ರೂ.ನಿಂದ 29.72 ಲಕ್ಷ ರೂ.ಗಳವರೆಗೆ ಇವೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read