ನ್ಯೂಯಾರ್ಕ್: ರಷ್ಯಾದೊಂದಿಗೆ ವ್ಯವಹರಿಸುವ ಎಲ್ಲಾ ದೇಶಗಳ ಮೇಲೆ ಕಠಿಣ ನಿರ್ಬಂಧ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಡೊನಾಲ್ಡ್ರನ್ ಆಡಳಿತ ಮತ್ತು ರಿಪಬ್ಲಿಕನ್ ದಸ್ಯರು ರಷ್ಯಾ ಗುರಿಯಾಗಿಸಿಕೊಂಡು ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದ್ದಾರೆ.
ರಷ್ಯಾ ಅಧ್ಯಕ್ಷ ಪುಟಿನ್ ಅವರ ಮೇಲೆ ಒತ್ತಡ ಹೇರುವ ಕ್ರಮಗಳನ್ನು ಕಾಂಗ್ರೆಸ್ ಅಂಗೀಕರಿಸುವ ಸಮಯ ಬಂದಿದೆ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡೊನಾಲ್ಡ್ ಟ್ರಂಪ್, ಕಾಂಗ್ರೆಸ್ ಹಾಗೆ ಮಾಡುತ್ತಿರುವದನ್ನು ನಾನು ಕೇಳಿದ್ದೇನೆ, ನನಗೂ ಅದು ಸರಿ ಎನಿಸಿದೆ. ಕಾಂಗ್ರೆಸ್ ನವರು ಕಾನೂನು ಅಂಗೀಕರಿಸಲಿದ್ದು ರಿಪಬ್ಲಿಕನ್ನರು ಅದನ್ನು ಜಾರಿಗೆ ತರಲು ಮುಂದಾಗಿದ್ದಾರೆ. ರಷ್ಯಾದೊಂದಿಗೆ ವ್ಯವಹಾರ ಮಾಡುವ ಯಾವುದೇ ದೇಶದ ಮೇಲೆ ಕಠಿಣ ನಿರ್ಬಂಧ ವಿಧಿಸಲಿದ್ದಾರೆ. ಆ ಪಟ್ಟಿಗೆ ಇರಾನ್ ಅನ್ನು ಸೇರಿಸುವಂತೆ ಸೂಚನೆ ನೀಡಿದ್ದೇನೆ ಎಂದು ಟ್ರಂಪ್ ಹೇಳಿದ್ದಾರೆ.
