ಕೇರಳ : 23 ವರ್ಷದ ಗರ್ಭಿಣಿಯೊಬ್ಬರು ಮಂಗಳವಾರ ತ್ರಿಶೂರ್ನಲ್ಲಿರುವ ತನ್ನ ಪತಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಮತ್ತು ಅವರ ತಾಯಿಯ ದೀರ್ಘಕಾಲದ ಕೌಟುಂಬಿಕ ಹಿಂಸಾಚಾರಕ್ಕೆ ಬೇಸತ್ತು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಸಾಯುವ ಮುನ್ನ ತಮ್ಮ ತಾಯಿಗೆ ಆಘಾತಕಾರಿ ಸಂದೇಶ ಕಳುಹಿಸಿದ್ದರು.
ವೆಲ್ಲಂಗುಲರ್ ನಿವಾಸಿ ನೌಫಲ್ ಅವರ ಪತ್ನಿ ಫಸೀಲಾ ಜುಲೈ 29 ರಂದು ತನ್ನ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಒಂದು ದಿನದ ನಂತರ, ಆಕೆಯ ಪತಿ ನೌಫಲ್ ಮತ್ತು ಅತ್ತೆ ರಮ್ಲಾ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು. ಈ ಸಾವು ಕೌಟುಂಬಿಕ ಹಿಂಸಾಚಾರದಿಂದಾಗಿ ಆತ್ಮಹತ್ಯೆ ಎಂದು ಮಹಿಳೆಯ ಕುಟುಂಬದವರು ನೀಡಿದ ಹೇಳಿಕೆಯ ಆಧಾರದ ಮೇಲೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.
ಫಸೀಲಾ ತನ್ನ ತಾಯಿಗೆ ವಾಟ್ಸಾಪ್ನಲ್ಲಿ ಕೆಲವು ಸಂದೇಶಗಳನ್ನು ಕಳುಹಿಸಿದ್ದಳು, ಅದರಲ್ಲಿ ಅವಳು ಎದುರಿಸಿದ ಕಿರುಕುಳವನ್ನು ವಿವರಿಸಿದ್ದಳು. ತನ್ನ ಅವಸ್ಥೆಯನ್ನು ವಿವರಿಸುತ್ತಾ, ಫಸೀಲಾ ತನ್ನ ತಾಯಿಗೆ ತಾನು ಎರಡನೇ ಬಾರಿಗೆ ಗರ್ಭಿಣಿಯಾಗಿದ್ದೇನೆ ಎಂದು ಹೇಳಿದ್ದಾಳೆ. ಮತ್ತು ನನ್ನ ಗಂಡ ನನ್ನ ಹೊಟ್ಟೆಗೆ ಹಲವಾರು ಬಾರಿ ಒದ್ದು ಕೈ ಮುರಿದಿದ್ದಾನೆ. ನನ್ನ ಅತ್ತೆ ತನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಅವರು ಆರೋಪಿಸಿದ್ದರು. ತನ್ನ ಕೊನೆಯ ಸಂದೇಶಗಳಲ್ಲಿ ಒಂದರಲ್ಲಿ, ಫಸೀಲಾ ತನ್ನ ತಾಯಿಗೆ ತಾನು ಸಾಯುತ್ತಿದ್ದೇನೆ ಅಥವಾ “ಇಲ್ಲದಿದ್ದರೆ ಅವರು ನನ್ನನ್ನು ಕೊಲ್ಲುತ್ತಾರೆ” ಎಂದು ತಿಳಿಸಿದ್ದಳು .ಮಗಳನ್ನು ಕಳೆದುಕೊಂಡ ಪೋಷಕರು ಕಣ್ಣೀರು ಹಾಕುತ್ತಿದ್ದು, ಘಟನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.