ಸಿಗರೇಟ್ ಸೇದಲು ಸಿಗದ ಅವಕಾಶ; ಫ್ಲೈಟ್ ನಲ್ಲೇ ಟಾಪ್ ಕಳಚಿ ಅರೆ ಬೆತ್ತಲೆಯಾದ ಮಹಿಳೆಯಿಂದ ದಾಂಧಲೆ

Moment topless passenger refuses to put clothes on after 'trying to storm  cockpit and biting flight' attendant | The Sun

ರಷ್ಯಾದ ಸ್ಟಾವ್ರೋಪೋಲೋದಿಂದ ಮಾಸ್ಕೋಗೆ ತೆರಳುತ್ತಿದ್ದ ವಿಮಾನದಲ್ಲಿ ನಾಟಕೀಯ ಘಟನೆ ನಡೆದಿದೆ. ಸಿಗರೇಟ್ ಸೇದಲು ತನಗೆ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ತನ್ನ ಟಾಪ್ ಕಳಚಿ ಅರೆಬೆತ್ತಲೆಯಾದ ಮಹಿಳೆಯೊಬ್ಬಳು ದಾಂಧಲೆ ನಡೆಸಿದ್ದಾಳೆ.

49 ವರ್ಷದ Anzhelika Moskviktina ಎಂಬ ಹೆಸರಿನ ಈ ಮಹಿಳೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಟಾಯ್ಲೆಟ್ ಗೆ ಹೋಗಿ ಸಿಗರೇಟ್ ಹೊತ್ತಿಸಿದ್ದಾಳೆ. ಇದು ಸಿಬ್ಬಂದಿಯ ಗಮನಕ್ಕೆ ಬರುತ್ತಿದ್ದಂತೆ ಆಕೆಗೆ ಎಚ್ಚರಿಕೆ ನೀಡಲಾಗಿದೆ.

ಇದರಿಂದ ಆಕ್ರೋಶಗೊಂಡ ಆಕೆ ತನ್ನ ಟಾಪ್ ಕಳಚಿ ಅರೆ ಬೆತ್ತಲೆಯಾಗಿದ್ದಲ್ಲದೆ ಸಿಬ್ಬಂದಿಯ ಕೈ ಕಚ್ಚಿದ್ದಾಳೆ. ನಾನು ಸಾಯುತ್ತೇನೆ ಎಂದು ಅರ್ಭಟ ನಡೆಸಿದ ಆಕೆ ವಿಮಾನದಲ್ಲಿ ಅರೆ ಬೆತ್ತಲೆಯಾಗಿಯೇ ಅಡ್ಡಾಡಿದ್ದಾಳೆ.

ಬಳಿಕ ಎಕ್ಸಿಕ್ಯೂಟಿವ್ ಕ್ಲಾಸ್ ಪ್ರಯಾಣಿಕರ ನೆರವಿನಿಂದ ಆಕೆಯನ್ನು ಹಿಡಿದ ಸಿಬ್ಬಂದಿ, ಕೈಗೆ ಕೋಳ ತೊಡಿಸಿ ಕೂರಿಸಿದ್ದಾರೆ. ವಿಮಾನ ಮಾಸ್ಕೋ ತಲುಪುತ್ತಿದ್ದಂತೆ ಪೊಲೀಸರು ಆಕೆಯನ್ನು ವಶಕ್ಕೆ ಪಡೆದಿದ್ದು, ವಿಮಾನದಲ್ಲಿ ಮಹಿಳೆ ನಡೆಸಿದ ದಾಂಧಲೆ ವಿಡಿಯೋ ಹಾಗು ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read