ಐಪಿಎಲ್, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಗರಿಷ್ಠ ರನ್ ಚೇಸ್ ದಾಖಲೆ ಬರೆದ ಪಂಜಾಬ್ ಕಿಂಗ್ಸ್

ಕೊಲ್ಕತ್ತಾ: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಕೊಲ್ಕತ್ತಾ ನೀಡಿದ 262 ರನ್ ಗಳ ಬೃಹತ್ ಗುರಿಯನ್ನು ಎಂಟು ಎಸೆತ ಬಾಕಿ ಉಳಿಸಿಕೊಂಡು ತಲುಪಿದ ಪಂಜಾಬ್ ಕಿಂಗ್ಸ್ ಐಪಿಎಲ್ ಮತ್ತು ಟಿ20 ಇತಿಹಾಸದಲ್ಲಿ ಗರಿಷ್ಠ ರನ್ ಚೇಸಿಂಗ್ ಮಾಡಿ ದಾಖಲೆ ಬರೆದಿದೆ.

ಪಂಜಾಬ್ ಕಿಂಗ್ಸ್ ಟೀ20 ಕ್ರಿಕೆಟ್ ನಲ್ಲಿ ಚೇಸಿಂಗ್ ನಲ್ಲಿ ವಿಶ್ವದಾಖಲೆ ಬರೆದಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೊಲ್ಕತ್ತಾ ತಂಡ 6 ವಿಕೆಟ್ ನಷ್ಟಕ್ಕೆ 261 ರನ್ ಗಳಿಸಿತು. ಇಷ್ಟು ದೊಡ್ಡ ಮೊತ್ತವನ್ನು ಪಂಜಾಬ್ ತಲುಪುವುದು ಕನಸಿನ ಮಾತಾಗಿತ್ತು. ಆದರೆ ಇದನ್ನು ಹುಸಿಗೊಳಿಸಿದ ಪಂಜಾಬ್ ಬ್ಯಾಟರ್ ಗಳು 8 ವಿಕೆಟ್ ಗಳಿಂದ ಜಯಿಸಿದೆ.

ಬೇರ್ ಸ್ಟೋವ್ ಅಜೇಯ 108, ಶಶಾಂಕ್ ಅಜೇಯ 68, ಪ್ರಭು ಸಿಮ್ರನ್ 54 ರನ್ ಗಳಿಸಿದರು. ಪಂಜಾಬ್ ತಂಡ 18.4 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 262 ರನ್ ಗಳಿಸಿತು.

ಎರಡು ತಂಡಗಳು ಪಂದ್ಯದಲ್ಲಿ 42 ಸಿಕ್ಸರ್ ಸಿಡಿಸಿದ್ದು, ಇದು ಪಂದ್ಯವೊಂದರ ಗರಿಷ್ಟ ಸಿಕ್ಸರ್ ಆಗಿದೆ. ಪಂದ್ಯದಲ್ಲಿ ಒಟ್ಟು 523 ರನ್ ದಾಖಲಾಗಿದ್ದು, ಎರಡನೇ ಗರಿಷ್ಠ ರನ್ ಆಗಿದೆ. ಆರ್‌ಸಿಬಿ -ಹೈದರಾಬಾದ್ ಪಂದ್ಯದಲ್ಲಿ 549 ರನ್ ದಾಖಲಾಗಿತ್ತು.

ಟಿ20 ಗರಿಷ್ಠ ರನ್ ಚೇಸ್

ಪಂಜಾಬ್ 262

ದಕ್ಷಿಣ ಆಫ್ರಿಕಾ 258

ಮಿಡ್ಲ್ ಸೆಕ್ಟ್ 253

ಆಸ್ಟ್ರೇಲಿಯಾ 246

ಬಲ್ಗೇರಿಯಾ 243

ಐಪಿಎಲ್ ನಲ್ಲಿ ಗರಿಷ್ಠ ರನ್ ಚೇಸ್

ಪಂಜಾಬ್ 262

ರಾಜಸ್ಥಾನ 224

ಮುಂಬೈ 219

ರಾಜಸ್ಥಾನ 210

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read