BIG UPDATE : ನಾಳೆ ‘ಕರ್ನಾಟಕ ಬಂದ್’ : ಏನಿರುತ್ತೆ, ಏನಿರಲ್ಲ..? ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು : ರಾಜ್ಯಾದ್ಯಂತ ‘ಕಾವೇರಿ ಕಿಚ್ಚು’ ಜೋರಾಗಿದ್ದು, ನಾಳೆ ಕರ್ನಾಟಕ ಬಂದ್ ಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿದೆ.  ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ಖಂಡಿಸಿ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಸೆ.29ರಂದು ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ.

ಬೆಂಗಳೂರು ನಗರದ ವಿವಿಧ ಪ್ರಮುಖ ಬೀದಿ ಬೀದಿಗಳಲ್ಲಿ ವಾಟಾಳ್ ನಾಗಾರಾಜ್ ನೇತೃತ್ವದಲ್ಲಿ ಅಭಿಯಾನ ಆರಂಭವಾಗಿದ್ದು, ನಾಳಿನ ಬಂದ್ ಗೆ ಸಂಪೂರ್ಣ ಬೆಂಬಲ ನೀಡುವಂತೆ ಎಲ್ಲಾ ಸಂಘಟನೆ, ಅಸೋಸಿಯೇಷನ್ ಬೆಂಬಲ ನೀಡಿದೆ. ಇನ್ನೂ ನಾಳೆ ಕರ್ನಾಟಕ ಸಂಪೂರ್ಣ ಸ್ತಬ್ದವಾಗುತ್ತಿದ್ದು, ರಾಜ್ಯದಲ್ಲಿ ಏನಿರುತ್ತೆ, ಏನಿರಲ್ಲ ಎಂಬ ಮಾಹಿತಿಯನ್ನು ನೋಡೋಣ.

ಏನಿರಲ್ಲ..?

1) ರಾಜ್ಯಾದ್ಯಂತ ಚಿತ್ರ ಪ್ರದರ್ಶನ ಸ್ಥಗಿತ.

2) ಓಲಾ, ಊಬರ್, ಆಟೋ ಸೇವೆ ಸ್ಥಗಿತ.

3) ಸಿನಿಮಾ, ಧಾರಾವಾಹಿಗಳ ಶೂಟಿಂಗ್ ಸ್ತಬ್ಧವಾಗಲಿದೆ.

4) ಶಾಲಾ-ಕಾಲೇಜುಗಳು ತೆರೆಯೋದು ಅನುಮಾನ ( ರಜೆ ನೀಡುವ ಅಧಿಕಾರ ಆಯಾ ಜಿಲ್ಲಾಧಿಕಾರಿಗಳಿಗೆ)

5) ಶಾಪಿಂಗ್ ಮಾಲ್ ಬಂದ್.

6) ಹೋಟೆಲ್ ಗಳು ಬಂದ್ ಆಗಲಿದೆ. ( ಊಟ-ತಿಂಡಿ ಸಿಗಲ್ಲ)

7) ಬಂದ್ ನಿಂದ ಕೆಲವು ಅಂಗಡಿ ಮುಂಗಟ್ಟುಗಳು ಬಂದ್ ಆಗಿರಲಿದೆ ಎನ್ನಲಾಗಿದ್ದು, ಸಾರ್ವಜನಿಕರು ಮುಂಚಿತವಾಗಿ ದಿನಸಿ ಸಾಮಾನು ಕೊಂಡುಕೊಳ್ಳುದು ಉತ್ತಮ.

8) ನಾಳೆ ನಿಗದಿಯಾಗಿದ್ದ ದಾವಣಗೆರೆ, ವಿಟಿಯು, ಕೃಷ್ಣದೇವರಾಯ ವಿವಿ ಪರೀಕ್ಷೆಗಳು ಮುಂದೂಡಿಕೆ

9) ನಾಳೆ ಯಾವುದೇ ಪ್ರತಿಭಟನೆ, ಮೆರವಣಿಗೆಗೆ ಅವಕಾಶ ಇಲ್ಲ

10) ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಸಂಪೂರ್ಣ ಬಂದ್

11) ಖಾಸಗಿ ಬಸ್ ಗಳ ಸಂಚಾರ ಇರಲ್ಲ.

12) ಬೇಕರಿ, ಅಂಗಡಿಗಳು ಮುಚ್ಚಿರುತ್ತವೆ.

13) ಜ್ಯುವೆಲ್ಲರಿ ಶಾಪ್ ಬಂದ್

14)  ಬೀದಿ ಬದಿ  ಸಿಗುವ ಊಟ-ತಿಂಡಿ,  ವ್ಯಾಪಾರ ಬಂದ್

ಏರ್ ಪೋರ್ಟ್ ಟ್ಯಾಕ್ಸಿ ಚಾಲಕ ಸಂಘ, ಖಾಸಗಿ ಸಾರಿಗೆ ಸಂಘಟನೆ,  ಬಿಬಿಎಂಪಿ ನೌಕರರ ಸಂಘ, ಶಾಲಾ ಸಂಘಟನೆಗಳಾದ ರುಪ್ಸ, ಕ್ಯಾಮ್ಸ್, ಬಾರ್ ಆಂಡ್ ರೆಸ್ಟುರೆಂಟ್ ಅಸೋಸಿಯೇಶನ್ ಕರ್ನಾಟಕ ಬಂದ್ ಗೆ ಸಂಪೂರ್ಣ ಬೆಂಬಲ ನೀಡಿದೆ.  ಕಬ್ಬು ಬೆಳೆಗಾರರ ಸಮಿತಿ   ಕರವೇ ನಾರಾಯಣ ಗೌಡರ ಬಣ ಕರ್ನಾಟಕ ಬಂದ್ ಗೆ ಬೆಂಬಲ ನೀಡಿಲ್ಲ ಎನ್ನಲಾಗುತ್ತಿದೆ.

ಏನಿರುತ್ತೆ..?

1) ಹಾಲು, ದಿನ ಪತ್ರಿಕೆ ಸೇವೆ ಎಂದಿನಂತೆ ಇರಲಿದೆ.

2) ಕೆಎಸ್ ಆರ್ ಟಿಸಿ ಹಾಗೂ ಬಿಎಂಟಿಸಿ ಸೇರಿದಂತೆ ಸರ್ಕಾರದ ಎಲ್ಲಾ ಸಾರಿಗೆ ಬಸ್ ಸಂಚಾರ ಎಂದಿನಂತೆ ಇರಲಿದೆ.

3) ವೈದ್ಯಕೀಯ ಸೇವೆಗಳು, ಮೆಡಿಕಲ್ ಶಾಪ್ ಓಪನ್ ಇರಲಿದೆ.

4) ಆಂಬುಲೆನ್ಸ್ , ಅಗ್ನಿಶಾಮಕ ದಳ, ಪೆಟ್ರೋಲ್ ಬಂಕ್ , ಪೊಲೀಸ್ ಸೇವೆ ಸೇರಿದಂತೆ ಎಲ್ಲಾ ತುರ್ತು ಸೇವೆ ಸಿಗಲಿದೆ.

ಇನ್ನೂ, ಇಂದು ಮಧ್ಯರಾತ್ರಿಯಿಂದಲೇ ಬೆಂಗಳೂರಲ್ಲಿ 144 ಸೆಕ್ಷನ್ ಜಾರಿಯಾಗಲಿದೆ , ಒಂದು ವೇಳೆ ಬಲವಂತವಾಗಿ ಬಂದ್ ಮಾಡಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಎಚ್ಚರಿಕೆ ನೀಡಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read