‘ಜಸ್ಟ್ ಪಾಸ್’ ರಾಜ್ಯದಾದ್ಯಂತ‌ ನಾಳೆ ರಿಲೀಸ್

ಜಸ್ಟ್ ಪಾಸ್' ರಿಲೀಸ್ ಡೇಟ್ ಫಿಕ್ಸ್!- Kannada Prabha

ಕೆ ಎಂ ರಾಘು ನಿರ್ದೇಶನದ ಬಹು ನಿರೀಕ್ಷಿತ ‘ಜಸ್ಟ್ ಪಾಸ್’ ಸಿನಿಮಾ ನಾಳೆ ರಾಜ್ಯದಾದ್ಯಂತ ಬಿಡುಗಡೆಯಾಗಲಿದ್ದು, ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ಸಜ್ಜಾಗಿದೆ. ಈ ಚಿತ್ರದಲ್ಲಿ ಶ್ರೀ ಮಹದೇವ್ ಸೇರಿದಂತೆ ಪ್ರಣತಿ, ಸಾಧು ಕೋಕಿಲ, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ಪ್ರಕಾಶ್ ತುಮ್ಮಿನಾಡು, ಗೋವಿಂದೇಗೌಡ, ಅರ್ಪಿತ, ಡುಮ್ಮ ವಿಶ್ವಾಸ್, ದಾನಪ್ಪ ಸೇರಿದಂತೆ ಮೊದಲಾದ ಕಲಾವಿದರು ಬಣ್ಣ ಹಚ್ಚಿದ್ದಾರೆ.

ರಾಯ್ ಎಂಟರ್ಟೈನ್ಮೆಂಟ್  ಬ್ಯಾನರ್ ನಲ್ಲಿ ಕೆವಿ ಶಶಿಧರ್ ನಿರ್ಮಾಣ ಮಾಡಿದ್ದು, ನಿರ್ದೇಶಕ ಕೆ ಎಂ ರಘು ಮತ್ತು ರಘು ನಿಡುವಳ್ಳಿ ಡೈಲಾಗ್ ಬರೆದಿದ್ದಾರೆ. ಕೆಎಂ ಪ್ರಕಾಶ್ ಸಂಕಲನ, ಸುಜಯ್ ಕುಮಾರ್ ಬಾವಿಕಟ್ಟೆ ಛಾಯಾಗ್ರಹಣ, ಹಾಗೂ ಹರ್ಷವರ್ಧನ್ ರಾಜ್ ಸಂಗೀತವಿದೆ. ಈಗಾಗಲೇ ತನ್ನ ಟ್ರೈಲರ್ ಮೂಲಕವೇ ಗಮನ ಸೆಳೆದಿರುವ ಈ ಸಿನಿಮಾದಲ್ಲಿ ಕಾಲೇಜ್ ಹುಡುಗರ ತರಲೆ ತಮಾಷೆಗಳನ್ನು ನೋಡಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read