ನಾಳೆಯಿಂದ ಮಹಿಳಾ ಪ್ರೀಮಿಯರ್ ಲೀಗ್; ಇಲ್ಲಿದೆ RCB ವೇಳಾಪಟ್ಟಿ

ಶುಕ್ರವಾರದಿಂದ ದೇಶದಲ್ಲಿ ಮಹಿಳಾ ಪ್ರೀಮಿಯರ್ ಲೀಗ್ ಕದನ ಆರಂಭವಾಗಲಿದ್ದು, ಈ ಲೀಗ್‌ನಲ್ಲಿ ಒಟ್ಟು ಐದು ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಮೂರನೇ ಆವೃತ್ತಿಯ ಲೀಗ್‌ ಎಲ್ಲರ ಚಿತ್ತ ಸೆಳೆದಿದೆ. ಸ್ಟಾರ್ ಆಟಗಾರ್ತಿಯರು ಒಂದೇ ಸೂರಿನಡಿ ಕಾಣಿಸಿಕೊಳ್ಳುವುದು ಅಭಿಮಾನಿಗಳ ಗಮನ ಸೆಳೆದಿದೆ. ಐದು ತಂಡಗಳ ಲೀಗ್‌ನಲ್ಲಿ ಎಲ್ಲ ತಂಡಗಳು ಒಟ್ಟು 8 ಪಂದ್ಯಗಳಲ್ಲಿ ಪ್ರಶಸ್ತಿಗಾಗಿ ಕಾದಾಡಲಿವೆ.

ಪುರುಷರ ಲೀಗ್‌ನಲ್ಲಿ ಇರುವಂತೆಯೇ ಈ ಲೀಗ್‌ನಲ್ಲೂ ತವರು ನೆಲ ಹಾಗೂ ವಿರೋಧಿಗಳ ಅಂಗಳದಲ್ಲಿ ತಲಾ ಒಮ್ಮೆ ತಂಡಗಳು ಕಾದಾಟ ನಡೆಸುತ್ತವೆ. ಲೀಗ್‌ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ ನಾಲ್ಕು ತಂಡಗಳು ಮುಂದಿನ ಹಂತಕ್ಕೆ ಅರ್ಹತೆ ಪಡೆಯುತ್ತವೆ. ಆರ್‌ಸಿಬಿ ಸಹ ಈ ಲೀಗ್‌ನಲ್ಲಿ ಕಾಣಿಸಿಕೊಳ್ಳಲಿದ್ದು, ಎರಡನೇ ಆವೃತ್ತಿಯ ಡಬ್ಲ್ಯುಪಿಎಲ್‌ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿರುವ ಆರ್‌ಸಿಬಿ, ಮೂರನೇ ಲೀಗ್‌ನಲ್ಲೂ ಚಾಂಪಿಯನ್‌ ಪಟ್ಟಕ್ಕೇರುವ ಕನಸು ಕಾಣುತ್ತಿದೆ.

ಆರ್‌ಸಿಬಿ ತಂಡದಲ್ಲಿ ಸ್ಟಾರ್ ಆಟಗಾರ್ತಿಯರ ದಂಡೇ ಇದೆ. ವಿಶ್ವ ಮಹಿಳಾ ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಆಸ್ಟ್ರೇಲಿಯಾದ ಎಲ್ಲಿಸಾ ಪೆರ್ರಿ, ಇಂಗ್ಲೆಂಡ್‌ನ ಸೋಫಿಯಾ ಡಿವೈನ್‌, ಭಾರತ ಸ್ಮೃತಿ ಮಂದಾನ, ರಿಚಾ ಘೋಷ್‌ ರಂತಹ ಸ್ಟಾರ್ ಆಟಗಾರರು ತಂಡದಲ್ಲಿದ್ದು, ಭರವಸೆಯನ್ನು ಮೂಡಿಸಿದ್ದಾರೆ. ಯುವ ಹಾಗೂ ಅನುಭವಿ ಆಟಗಾರ್ತಿಯರನ್ನು ಒಳಗೊಂಡಿರುವ ಬಲಾಢ್ಯ ತಂಡವನ್ನು ಹೊಂದಿದೆ. ಬೆಂಗಳೂರು ತವರಿನಲ್ಲಿ ನಾಲ್ಕು ಹಾಗೂ ಬೇರೆ ಮೈದಾನದಲ್ಲಿ ನಾಲ್ಕು ಪಂದ್ಯಗಳನ್ನು ಆಡಲಿದೆ.

RCB ತಂಡದ ವೇಳಾ ಪಟ್ಟಿ ಹೀಗಿದೆ,

ಫೆ.14, ಗುಜರಾತ್‌ ಜೈಂಟ್ಸ್‌ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ವಡೋದರಾ, ರಾತ್ರಿ 7.30ಕ್ಕೆ

ಫೆ.17, ಡೆಲ್ಲಿ ಕ್ಯಾಪಿಟಲ್ಸ್‌ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ವಡೋದರಾ, ರಾತ್ರಿ 7.30ಕ್ಕೆ

ಫೆ.21, ಮುಂಬೈ ಇಂಡಿಯನ್ಸ್‌ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು, ಬೆಂಗಳೂರು, ರಾತ್ರಿ 7.30ಕ್ಕೆ

ಫೆ.24, ರಾಯಲ್ ಚಾಲೆಂಜರ್ಸ್‌ ಬೆಂಗಳೂರು vs ಯುಪಿ ವಾರಿಯರ್ಸ್‌, ಬೆಂಗಳೂರು, ರಾತ್ರಿ 7.30ಕ್ಕೆ

ಫೆ.27, ರಾಯಲ್ ಚಾಲೆಂಜರ್ಸ್‌ ಬೆಂಗಳೂರು vs ಗುಜರಾತ್ ಟೈಟಾನ್ಸ್‌, ಬೆಂಗಳೂರು, ರಾತ್ರಿ 7.30ಕ್ಕೆ

ಮಾ.1, ರಾಯಲ್ ಚಾಲೆಂಜರ್ಸ್‌ ಬೆಂಗಳೂರು vs ಡೆಲ್ಲಿ ಕ್ಯಾಪಿಟಲ್ಸ್, ಬೆಂಗಳೂರು, ರಾತ್ರಿ 7.30ಕ್ಕೆ

ಮಾ.8, ಯುಪಿ ವಾರಿಯರ್ಸ್‌ vs ರಾಯಲ್ ಚಾಲೆಂಜರ್ಸ್‌ ಬೆಂಗಳೂರು, ಲಕ್ನೋ, ರಾತ್ರಿ 7.30ಕ್ಕೆ

ಮಾ.11, ಮುಂಬೈ ಇಂಡಿಯನ್ಸ್‌ vs ರಾಯಲ್ ಚಾಲೆಂಜರ್ಸ್‌ ಬೆಂಗಳೂರು, ಮುಂಬೈ, ರಾತ್ರಿ 7.30ಕ್ಕೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read