ಚೆನ್ನೈ: ಟಾಲಿವುಡ್ ಖ್ಯಾತ ನಟ, ತಮಿಳಗ ವೆಟ್ರಿ ಕಳಗಂ ಸಂಸ್ಥಾಪಕ ಅಧ್ಯಕ್ಷ ವಿಜಯ್ ಮನೆಯಲ್ಲಿ ಭದ್ರತಾ ಲೋಪ ಸಂಭವಿಸಿದೆ. ನಟ ವಿಜಯ್ ಮನೆಗೆ ಅಪರಿಚಿತ ಯುವಕನೊಬ್ಬ ನುಗ್ಗಿರುವ ಘಟನೆ ಚೆನ್ನೈನಲ್ಲಿ ನಡೆದಿದೆ.
ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ ಅಪರಿಚಿತ ಯುವಕನೊಬ್ಬ ವಿಜಯ್ ಮನೆಗೆ ನುಗ್ಗಿದ್ದಾನೆ. ಚೆನ್ನೈನ ಪೂರ್ವ ಕರಾವಳಿ ರಸ್ತೆಯಲ್ಲಿರುವ ನೀಲಂಕರೆಯಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಗೆ ನುಗ್ಗಿರುವ ಯುವಕ ವಿಜಯ್ ಮನೆಯ ಟೆರೇಸ್ ಮೇಲೆ ಹತ್ತಿದ್ದಾನೆ.
ಘಟನೆ ಬಳಿಕ ಪೊಲೀಸರು 24 ವರ್ಷದ ಯುವಕನನ್ನು ವಶಕ್ಕೆ ಪಡೆದಿದ್ದಾರೆ. ವಿಜಯ್ ಮನೆಗೆ ನುಗ್ಗಿದ ಯುವಕ ಮಾನಸಿಕ ಅಸ್ವಸ್ಥ ಎಂದು ತಿಳಿದುಬಂದಿದೆ.