ಮಾಜಿ ಪ್ರೇಯಸಿ ಆತ್ಮಹತ್ಯೆ ಯತ್ನ: ನಟ ರಾಜ್ ತರುಣ್ ವಿರುದ್ಧ ವಂಚನೆ ಪ್ರಕರಣ ದಾಖಲು

ಹೈದರಾಬಾದ್: ಟಾಲಿವುಡ್ ಖ್ಯಾತ ನಟ ರಾಜ್ ತರುಣ್ ವಿರುದ್ಧ ಪ್ರೇಯಸಿಗೆ ಮೋಸ ಮಾಡಿದ ಪ್ರಕರಣ ದಾಖಲಾಗಿದೆ. ಮಾಜಿ ಪ್ರೇಯಸಿ ಲಾವಣ್ಯ, ತಡರಾತ್ರಿ ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರು ರಕ್ಷಿಸಿದ್ದಾರೆ.

ರಾಜ್ ತರುಣ್ ಹಾಗೂ ತಾನು ಕಳೆದ ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದೆವು. ಮದುವೆಯಾಗುವುದಾಗಿ ನಂಬಿಸಿ ರಾಜ್ ತರುಣ್ ತನ್ನನ್ನು ದೈಹಿಕವಾಗಿಯೂ ಬಳಸಿಕೊಂಡಿದ್ದಾರೆ. ಆದರೆ ಈಗ ರಾಜ್ ತರುಣ್ ತನ್ನ ವಿರುದ್ಧವೇ ಷಡ್ಯಂತ್ರ ನಡೆಸಿದ್ದಾರೆ. ಅಲ್ಲದೇ ಬೇರೊಂದು ನಟಿಯೊಂದಿಗೆ ಪ್ರೀತಿ-ಪೇಮ ಎಂದು ಸುತ್ತಾಡುತ್ತಿದ್ದಾರೆ ಎಂದು ಲಾವಣ್ಯ ದೂರಿದ್ದಾರೆ.

ರಾಜ್ ತರುಣ್ ತನಗೆ ಮೋಸಮಾಡಿದ್ದಾಗಿ ಆರೋಪಿಸಿರುವ ಲಾವಣ್ಯ, ಕಾನೂನು ಹೋರಾಟಕ್ಕೂ ಮುಂದಾಗಿದ್ದಾರೆ. ಇದೇ ವಿಚಾರವಾಗಿ ಶನಿವಾರ ತಮ್ಮ ವಕೀಲರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ವಿರುದ್ಧ ನಡೆಯುತ್ತಿರುವ ಟ್ರೋಲಿಂಗ್, ರಾಜ್ ತರುಣ್ ತನ್ನ ವಿರುದ್ಧ ನಡೆಸುತ್ತಿರುವ ಷಡ್ಯಂತ್ರಗಳಿಂದ ತೀವ್ರವಾಗಿ ನೊಂದಿರುವುದಾಗಿಯೂ ಅಳಲು ತೋಡಿಕೊಂಡಿದ್ದರು. ತನಗೆ ಸಾವೊಂದೇ ಕೊನೆ ದಾರಿ ಎಂದು ವಕೀಲರ ಬಳಿ ಕಣ್ಣೀರಿಟ್ಟಿದ್ದರಂತೆ.

ಬಳಿಕ ಮನೆಗೆ ವಾಪಾಸ್ ಆದ ಲಾವಣ್ಯ, ತಡರಾತ್ರಿ ವಕೀಲರಿಗೆ ‘ಈ ಪ್ರಪಂಚದಲ್ಲಿ ನನ್ನ ದಿನಗಳು ಅಂತ್ಯವಾದವು. ಈ ಮೈಂಡ್ ಗೇಮ್, ಗಾಸಿಪ್ ಗಳಿಂದ ನನಗೆ ಸಾಕಾಗಿ ಹೋಗಿದೆ. ಸಾವೊಂದೇ ದಾರಿ’ ಎಂದು ಸಂದೇಶ ರವಾನಿಸಿದ್ದರು. ಈ ಬಗ್ಗೆ ವಕೀಲರು ನರ್ಸಂಗಿ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಲಾವಣ್ಯ ಮನೆಗೆ ಧಾವಿಸಿದ ಪೊಲೀಸರು ಲಾವಣ್ಯಳನ್ನು ಆತ್ಮಹತ್ಯೆ ಯತ್ನದಿಂದ ರಕ್ಷಿಸಿದ್ದಾರೆ.

ರಾಜ್ ತರುಣ್ ತನ್ನನ್ನು ಪ್ರೀತಿಸಿ ಈಗ ಬೇರೊಬ್ಬ ನಟಿಯೊಂದಿಗೆ ಇದ್ದು, ತನಗೆ ಮೋಸ ಮಾಡಿದ್ದಾರೆ. ರಾಜ್ ತರುಣ್ ನನ್ನು ಬಂಧಿಸುವಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ನರ್ಸಂಗಿ ಪೊಲೀಸ್ ಠಾಣೆಯಲ್ಲಿ ನಟ ರಾಜ್ ತರುಣ್ ವಿರುದ್ಧ ವಂಚನೆ ಕೇಸ್ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read