ಬಸ್ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್: 20 ರೂ.ವರೆಗೆ ಟಿಕೆಟ್ ದರ ಹೆಚ್ಚಿಸಿದ KSRTC; ಜನಸಾಮಾನ್ಯರಿಗೆ ಟೋಲ್ ಶುಲ್ಕದ ಬರೆ

ಬೆಂಗಳೂರು: ಹೈವೇಯಲ್ಲಿ ಸಂಚರಿಸುವ ಬಸ್ ಗಳ ಪ್ರಯಾಣದರ ಹೆಚ್ಚಳ ಮಾಡಲಾಗಿದೆ. ಕೆಎಸ್ಆರ್ಟಿಸಿ ಬಸ್ ಗಳ ಟಿಕೆಟ್ ದರ ಹೆಚ್ಚಳ ಮಾಡಲಾಗಿದೆ.

ಬೆಂಗಳೂರು -ಮೈಸೂರು ದಶಪಥ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಹೈವೇಯಲ್ಲಿ ಸಂಚರಿಸುವ ಕೆಎಸ್ಆರ್ಟಿಸಿ, ವೋಲ್ವೋ, ರಾಜಹಂಸ ಬಸ್ ಗಳ ಟಿಕೆಟ್ ದರವನ್ನು ಹೆಚ್ಚಳ ಮಾಡಲಾಗಿದೆ. ಕೆಎಸ್ಆರ್ಟಿಸಿ ಬಸ್ ಪ್ರಯಾಣ ದರ 15 ರೂಪಾಯಿ ಹೆಚ್ಚಳ ಮಾಡಲಾಗಿದೆ. ಐಷಾರಾಮಿ ಬಸ್ ಗಳ ಟಿಕೆಟ್ ದರ 20 ರೂಪಾಯಿ, ರಾಜಹಂಸ ಟಿಕೆಟ್ ದರ 18 ರೂಪಾಯಿ ಹೆಚ್ಚಳ ಮಾಡಲಾಗಿದ್ದು, ಟಿಕೆಟ್ ದರ ಹೆಚ್ಚಳವಾದ ಬಗ್ಗೆ ಕೆಎಸ್ಆರ್ಟಿಸಿಯಿಂದ ಪ್ರಕಟಣೆ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read