ಬೆಕ್ಕು ಮತ್ತು ಪುಟಾಣಿ ಕಂದನ ಕ್ಯೂಟ್​ ಆಟಕ್ಕೆ ಮನಸೋಲದವರೇ ಇಲ್ಲ….!

Toddler plays catch with cat sitting on stairs. Oh-so-cute video has Twitter gushing - India Todayಸಾಕು ಪ್ರಾಣಿಗಳಿಗೂ ಮಕ್ಕಳೆಂದರೆ ಅದೆಷ್ಟು ಇಷ್ಟ. ನಾಯಿ, ಬೆಕ್ಕುಗಳು ಮತ್ತು ಮಕ್ಕಳ ನಡುವಿನ ಪ್ರೀತಿಯನ್ನು ತೋರುವ ಹಲವಾರು ವಿಡಿಯೋಗಳು ವೈರಲ್​ ಆಗುತ್ತಿರುತ್ತವೆ. ದೊಡ್ಡವರು ಸ್ವಲ್ಪ ನೋವು ಕೊಟ್ಟರೂ ಬೆಕ್ಕು, ನಾಯಿಗಳು ವಾಪಸ್​ ಕಚ್ಚುವುದು ಇದೆ. ಆದರೆ ಮಕ್ಕಳು ಎಷ್ಟೇ ನೋವು ಮಾಡಿದರೂ ಸಾಕು ಪ್ರಾಣಿಗಳು ಏನೂ ಮಾಡದ ಕುತೂಹಲದ ಘಟನೆಗಳು ನಡೆಯುವುದನ್ನು ಸಾಕುಪ್ರಾಣಿ ಪ್ರಿಯರು ನೋಡುತ್ತಿರುತ್ತಾರೆ.

ಇದೀಗ ಪುಟಾಣಿ ಬೆಕ್ಕಿನ ಮರಿಯೊಂದು ಚಿಕ್ಕ ಪುಟಾಣಿಯ ಜೊತೆ ಆಟ ಆಡುವ ಕ್ಯೂಟ್​ ವಿಡಿಯೋ ವೈರಲ್​ ಆಗಿದೆ. ಟ್ವಿಟ್ಟರ್‌ನಲ್ಲಿ ಬ್ಯುಟೆಂಗೆಬೀಡೆನ್ ಹಂಚಿಕೊಂಡಿರುವ ವೀಡಿಯೊ ನೋಡಿದರೆ ಎಂಥ ನೋವು ಕೂಡ ಮಾಯವಾಗುತ್ತದೆ.

ಈ ವಿಡಿಯೋದಲ್ಲಿ ಮೆಟ್ಟಿಲುಗಳ ಮೇಲೆ ಬೆಕ್ಕು ಆರಾಮವಾಗಿ ಕುಳಿತಿದೆ. ಪುಟಾಣಿ ಮಗು ಕರ್ಚೀಫ್​ ಒಂದನ್ನು ಮೇಲಕ್ಕೆ ಎಸೆದಾಗ ಬೆಕ್ಕು ಅದನ್ನು ಹಿಡಿದುಕೊಂಡು ಕೆಳಕ್ಕೆ ಬಿಡುತ್ತದೆ. ಹೀಗೆ ಮಗು ಮತ್ತು ಬೆಕ್ಕು ಆಟವಾಡುವುದನ್ನು ನೋಡಬಹುದು. ಮನಸ್ಸಿಗೆ ಬೇಸರವಾದಾಗ ಖಂಡಿತವಾಗಿಯೂ ಇಂಥ ವಿಡಿಯೋ ನಮ್ಮ ಮನಸ್ಸನ್ನು ಆಹ್ಲಾದಗೊಳಿಸುತ್ತದೆ ಎಂದು ಹಲವರು ಕಮೆಂಟ್​ ಮೂಲಕ ತಿಳಿಸಿದ್ದಾರೆ.

https://twitter.com/buitengebieden/status/1629410087356846086?ref_src=twsrc%5Etfw%7Ctwcamp%5Etweetembed%7Ctwterm%5E1629410087356846086%7Ctwgr%5Ea9fbf35950d02de72f315bdab6093a994a3116bf%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ftoddler-plays-catch-with-cat-sitting-on-stairs-oh-so-cute-video-has-twitter-gushing-2339578-2023-02-25

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read