ಇಂದು ‘ಅಕ್ಷಯ ತೃತೀಯ’ ಖರೀದಿ ಭರಾಟೆ: 12 ಟನ್ ಚಿನ್ನ ಮಾರಾಟ, 16 ಸಾವಿರ ಕೋಟಿ ರೂ. ವಹಿವಾಟು ನಿರೀಕ್ಷೆ

ನವದೆಹಲಿ: ಅಕ್ಷಯ ತೃತೀಯ ದಿನವಾದ ಇಂದು ದೇಶದ ಚಿನಿವಾರ ಪೇಟೆಯಲ್ಲಿ ಗ್ರಾಹಕರಿಂದ ಖರೀದಿ ಭರಾಟೆ ನಡೆಯುವ ನಿರೀಕ್ಷೆ ಇದೆ.

ಅಖಿಲ ಭಾರತ ವರ್ತಕರ ಒಕ್ಕೂಟ ಚಿನಿವಾರಪೇಟೆ ಗ್ರಾಹಕರಿಂದ ಮಿಶ್ರ ಪ್ರತಿಕ್ರಿಯೆಗೆ ಸಾಕ್ಷಿಯಾಗುವ ಸಾಧ್ಯತೆ ಇದೆ ಎಂದು ಹೇಳಿಕೊಂಡಿದೆ. ಅಕ್ಷಯ ತೃತೀಯ ದಿನದಂದು ಸಾಮಾನ್ಯವಾಗಿ ಚಿನ್ನ, ಬೆಳ್ಳಿ ಆಭರಣಗಳ ಖರೀದಿ ಹೆಚ್ಚಾಗಿರುತ್ತದೆ. ಆದರೆ, ಬೆಲೆ ಏರಿಕೆಯಿಂದ ಖರೀದಿ ಉತ್ಸಾಹದ ಮೇಲೆ ಪರಿಣಾಮ ಬೀರುವ ಸಂಭವ ಇದೆ ಎಂದು ಹೇಳಲಾಗಿದೆ.

ಈ ಬಾರಿ ಅಕ್ಷಯ ತೃತೀಯ ದಿನದಂದು 12 ಸಾವಿರ ಕೋಟಿ ರೂಪಾಯಿ ಮೌಲ್ಯದ 12 ಟನ್ ಚಿನ್ನ ಮತ್ತು 4000 ಕೋಟಿ ರೂಪಾಯಿ ಮೌಲ್ಯದ 400 ಟನ್ ಬೆಳ್ಳಿ ಮಾರಾಟವಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಸುಮಾರು 16 ಸಾವಿರ ಕೋಟಿ ರೂಪಾಯಿ ವಹಿವಾಟು ನಡೆಯುವ ಅಂದಾಜು ಇದೆ.

ಕಳೆದ ವರ್ಷ ಅಕ್ಷಯ ತೃತೀಯ ದಿನದಂದು 10 ಗ್ರಾಂ ಚಿನ್ನದ ದರ 73,500 ರೂಪಾಯಿ ಇತ್ತು. ಈಗ ಒಂದು ಲಕ್ಷ ರೂಪಾಯಿ ಸಮೀಪದಲ್ಲಿದೆ. 86 ಸಾವಿರ ರೂಪಾಯಿ ಇದ್ದ ಬೆಳ್ಳಿಯ ದರ ಒಂದು ಲಕ್ಷ ರೂಪಾಯಿ ದಾಟಿದೆ. ಅಕ್ಷಯ ತೃತೀಯ ಹಬ್ಬ, ಮದುವೆ ಸೀಸನ್ ಆಗಿರುವುದರಿಂದ ಸಹಜವಾಗಿಯೇ ಗ್ರಾಹಕರು ಚಿನ್ನ ಬೆಳ್ಳಿ ಖರೀದಿಸತೊಡಗಿದ್ದಾರೆ. ಬೇಡಿಕೆ ಹೆಚ್ಚಾಗಿರುವುದರಿಂದ ಚಿನ್ನದ ಬೆಲೆ ಕೂಡ ಏರುಗತಿಯಲ್ಲಿ ಸಾಗಿದೆ. ಕಳೆದ ವರ್ಷ ಡಿಸೆಂಬರ್ 31 ರಂದು 10 ಗ್ರಾಂ ಚಿನ್ನದ ದರ 78,950 ರೂಪಾಯಿ ಇತ್ತು. ಪ್ರಸಕ್ತ 2025ರಲ್ಲಿ ಇದುವರೆಗೆ 10 ಗ್ರಾಂಗೆ 20,500 ರೂ. ಏರಿಕೆಯಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read