ಇಂದು ವರನಟ ಡಾ.ರಾಜ್ ಪುಣ್ಯಸ್ಮರಣೆ ; ಗೌರವ ನಮನ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಇಂದು ವರನಟ ಡಾ.! ರಾಜ್ ಪುಣ್ಯಸ್ಮರಣೆ ..ಈ ಹಿನ್ನೆಲೆ ಗೌರವ ಸಿಎಂ ಸಿದ್ದರಾಮಯ್ಯ ವರನಟನಿಗೆ ಗೌರವ ನಮನ ಸಲ್ಲಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಕುಮಾರ್ ಎಂದಾಕ್ಷಣ ತಟ್ಟನೆ ನೆನಪಾಗುವುದು ಅವರ ಸರಳತೆ, ಸಜ್ಜನಿಕೆ, ಅಕ್ಕರೆಯ ಮಾತುಗಳು. ನಾಯಕ, ಖಳನಾಯಕ, ಪೋಷಕ ಹೀಗೆ ಪ್ರತಿಯೊಂದು ಪಾತ್ರಕ್ಕೂ ಜೀವತುಂಬುತ್ತಿದ್ದ ಅವರು ತಮ್ಮ ಅತ್ಯದ್ಭುತ ನಟನೆ, ಸುಮಧುರ ಕಂಠಸಿರಿಯ ಮೂಲಕ ಹಲವು ದಶಕಗಳ ಕಾಲ ಕನ್ನಡದ ಸಿನಿಪ್ರಿಯರನ್ನು ರಂಜಿಸಿದವರು.

ಪ್ರತಿ ಬಾರಿ ಭೇಟಿಯಾದಾಗಲೂ “ನಮ್ಮ ಕಾಡಿನವರು” ಎಂದು ಪ್ರೀತಿಯಿಂದ ನನ್ನನ್ನು ಅಪ್ಪಿಕೊಳ್ಳುತ್ತಿದ್ದರು. ಇಂದು ಅವರ ಪುಣ್ಯಸ್ಮರಣೆ, ನಾಡು ನುಡಿಯ ಬಗ್ಗೆ ಅವರಿಗಿದ್ದ ಅಭಿಮಾನ, ಬದ್ಧತೆಯನ್ನು ಈ ಸಂದರ್ಭದಲ್ಲಿ ಗೌರವದಿಂದ ಸ್ಮರಿಸಿ, ನಮಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

https://twitter.com/siddaramaiah/status/1778649568499900890

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read