ತಮಿಳಿನ ಖ್ಯಾತ ನಟ ಸೂರ್ಯ ಅಭಿನಯದ ಶಿವ ನಿರ್ದೇಶನದ ಬಹು ನಿರೀಕ್ಷಿತ ‘ಕಂಗುವ’ ಚಿತ್ರ ಇದೇ ನವೆಂಬರ್ 14 ರಂದು ಸುಮಾರು 10,000 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದ್ದು, ಇಂದು ಹೈದರಾಬಾದ್ ನಲ್ಲಿ ಇದರ ಫ್ರೀ ರಿಲೀಸ್ ಇವೆಂಟ್ ಕಾರ್ಯಕ್ರಮ ನೆರವೇರಿಸಲು ಚಿತ್ರತಂಡ ಸಜ್ಜಾಗಿದೆ.
ಈ ಚಿತ್ರವನ್ನು ಯುವಿ ಕ್ರಿಯೇಷನ್ಸ್ ಹಾಗೂ ಸ್ಟುಡಿಯೋ ಗ್ರೀನ್ ಬ್ಯಾನರ್ ನಲ್ಲಿ ಕೆಇ ಜ್ಞಾನವೇಲ್ ರಾಜಾ, ವಿ. ವಂಶಿಕೃಷ್ಣ ರೆಡ್ಡಿ, ಪ್ರಮೋದ್ ಉಪ್ಪಲಪಾಟಿ ನಿರ್ಮಾಣ ಮಾಡಿದ್ದು, ಸೂರ್ಯ ಸೇರಿದಂತೆ ದಿಶಾ ಪಟಾನಿ, ಬಾಬಿ ಡಿಯೋಲ್, ನಟರಾಜನ್ ಸುಬ್ರಮಣ್ಯಂ, ಯೋಗಿ ಬಾಬು, ಕೋವೈ ಸರಳಾ, ಆನಂದರಾಜ್, ಟಿಎಂ ಕಾರ್ತಿಕ್, ಜಿ. ಮಾರಿಮುತ್ತು, ದೀಪಾ ವೆಂಕಟ್, ಬಾಲ ಸರವಣನ್, ಪ್ರೇಮ್ ಕುಮಾರ್, ರಾಜ್ ಅಯ್ಯಪ್ಪ ತೆರೆ ಹಂಚಿಕೊಂಡಿದ್ದಾರೆ. ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜನೆ ನೀಡಿದ್ದು, ನಿಶಾದ್ ಯೂಸುಫ್ ಸಂಕಲನ ಹಾಗೂ ವೆಟ್ರಿ ಪಳನಿಸಾಮಿ ಅವರ ಛಾಯಾಗ್ರಹಣವಿದೆ.