ಈ ರಾಶಿಯವರಿಗಿದೆ ಇಂದು ಅತ್ಯಂತ ಲಾಭದಾಯಕ ದಿನ

ಮೇಷ ರಾಶಿ

ಇಂದು ನಿಮಗೆ ಶುಭ ದಿನ. ಜವಾಬ್ಧಾರಿಗಳು ಹೆಚ್ಚಾಗುವ ಸಾಧ್ಯತೆ ಇದೆ. ಸಂಗಾತಿಯ ಸಹಕಾರದೊಂದಿಗೆ ಕೆಲಸವನ್ನು ಪೂರ್ಣಗೊಳಿಸಲಿದ್ದೀರಿ. ಕೋಪವನ್ನು ನಿಯಂತ್ರಿಸಿಕೊಳ್ಳಿ.

ವೃಷಭ ರಾಶಿ

ಇಂದು ನಿಮಗೆ ಶುಭ ಫಲಗಳಿವೆ. ನಿರುದ್ಯೋಗಿಗಳಾಗಿದ್ದಲ್ಲಿ ನಿಮಗೆ ಇಂದು ಶುಭ ಸಮಾಚಾರ ದೊರೆಯುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಹೊರಗೆ ಸುತ್ತಾಡಲು ತೆರಳಲಿದ್ದೀರಿ.

ಮಿಥುನ ರಾಶಿ

ಇಂದು ಅತ್ಯಂತ ಲಾಭದಾಯಕ ದಿನ. ಕಚೇರಿಯಲ್ಲಿ ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಬಾಂಧವ್ಯ ಉತ್ತಮವಾಗಿರುತ್ತದೆ. ಆರ್ಥಿಕ ಸಮಸ್ಯೆಗಳು ಪರಿಹಾರವಾಗಲಿವೆ.

ಕರ್ಕ ರಾಶಿ

ಧಾರ್ಮಿಕ ಕಾರ್ಯಗಳು, ಪೂಜೆ ಪುನಸ್ಕಾರದಲ್ಲಿ ತೊಡಗಿಕೊಳ್ಳಲಿದ್ದೀರಿ. ಹೊಸ ಕೆಲಸದ ಬಗ್ಗೆ ಯೋಚನೆ ಮಾಡಬಹುದು. ಕೋಪ ಮತ್ತು ಖರ್ಚಿನ ಮೇಲೆ ನಿಯಂತ್ರಣ ಇರಲಿ.

ಸಿಂಹ ರಾಶಿ

ಇಂದು ಜಾಗರೂಕರಾಗಿರಿ. ಆರೋಗ್ಯದ ಬಗ್ಗೆ ಗಮನವಿರಲಿ. ಹಣ ಗಳಿಸಲು ಹೊಸ ಅವಕಾಶಗಳು ಸಿಗಬಹುದು. ಆತ್ಮವಿಶ್ವಾಸ ಅಧಿಕವಾಗಿರುತ್ತದೆ. ಸಮಾಜದಲ್ಲಿ ಸ್ಥಾನಮಾನ ದೊರೆಯಲಿದೆ.

ಕನ್ಯಾ ರಾಶಿ

ವಿವಿಧ ಕ್ಷೇತ್ರಗಳಲ್ಲಿ ಪ್ರಸಿದ್ಧಿ ದೊರೆಯುತ್ತದೆ. ಸುಂದರ ವಸ್ತ್ರಾಭರಣ ಖರೀದಿಸಲಿದ್ದೀರಿ. ವಾಹನ ಸುಖ ಪ್ರಾಪ್ತಿಯಾಗಲಿದೆ. ಪಾಲುದಾರರೊಂದಿಗೆ ಬಾಂಧವ್ಯ ಉತ್ತಮವಾಗಿರುತ್ತದೆ.

ತುಲಾ ರಾಶಿ

ಮನೆಯಲ್ಲಿ ಸುಖ-ಶಾಂತಿ ನೆಲೆಸಲಿದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಹೊಸತನವಿರಲಿದೆ. ತಂದೆ-ತಾಯಿಯಿಂದ ಶುಭ ಸಮಾಚಾರ ಬರಬಹುದು. ಪ್ರತಿಸ್ಪರ್ಧಿಗಳೆದುರು ಗೆಲುವು ಸಿಗಲಿದೆ.

ವೃಶ್ಚಿಕ ರಾಶಿ

ಇಂದು ನಿಮಗೆ ಮಿಶ್ರಫಲವಿದೆ. ಹೊಸದೇನನ್ನಾದರೂ ಮಾಡಲು ಪ್ರೇರಣೆ ಸಿಗಬಹುದು. ಸಹೋದರರ ಜೊತೆಗಿನ ಭಿನ್ನಾಭಿಪ್ರಾಯವನ್ನು ಸರಿಪಡಿಸಿಕೊಳ್ಳಲಿದ್ದೀರಿ.

ಧನು ರಾಶಿ

ಇಂದು ಮನಸ್ಸಿನಲ್ಲಿ ಉದಾಸೀನತೆ ಆವರಿಸಿರುತ್ತದೆ. ಆದ್ರೂ ಉತ್ಸಾಹದ ಕೊರತೆಯಾಗುವುದಿಲ್ಲ. ಕೆಲಸಕ್ಕೆ ಸಂಬಂಧಪಟ್ಟಂತೆ ಚರ್ಚೆ ನಡೆಯಲಿದ್ದು, ಶೀಘ್ರವೇ ಪರಿಹಾರ ಕೂಡ ದೊರೆಯುತ್ತದೆ.

ಮಕರ ರಾಶಿ

ಹೊಸ ಕಾರ್ಯ ಆರಂಭಿಸಲು ಶುಭ ದಿನ. ಯಾರಿಗೂ ಸಾಲ ಕೊಡಲು ಹೋಗಬೇಡಿ. ಮನೆ, ಆಸ್ತಿ ಖರೀದಿಯಲ್ಲಿ ಎಚ್ಚರ ವಹಿಸಿ. ನೀವು ಅತ್ಯಂತ ಭಾಗ್ಯಶಾಲಿಗಳು. ಅದೃಷ್ಟ ನಿಮ್ಮ ಜೊತೆಗಿದೆ.

ಕುಂಭ ರಾಶಿ

ಇಂದು ಯಾರೊಂದಿಗೂ ವಾದ-ವಿವಾದ ಬೇಡ. ಧಾರ್ಮಿಕ ಕಾರ್ಯಗಳಿಗಾಗಿ ಹಣ ಖರ್ಚಾಗಬಹುದು. ಮನೆಯ ವಾತಾವರಣ ಹದಗೆಡದಂತೆ ಎಚ್ಚರ ವಹಿಸಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ಮೀನ ರಾಶಿ

ಇಂದು ನಿಮಗೆ ಶುಭ ದಿನ. ಹೊಸಬರ ಭೇಟಿಯಿಂದ ಲಾಭವಾಗಲಿದೆ. ಶಿಕ್ಷಣ, ಉದ್ಯಮ ಮತ್ತು ಉದ್ಯೋಗದಲ್ಲಿ ಮಹತ್ವಪೂರ್ಣ ಬದಲಾವಣೆಗಳಾಗಬಹುದು. ಪ್ರಯಾಣ ಕೈಗೊಳ್ಳುವ ಸಾಧ್ಯತೆ ಇದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read