ಇಂದು ಭಾರತ ಮತ್ತು ಇಂಗ್ಲೆಂಡ್ ನಡುವಣ ಅಭ್ಯಾಸ ಪಂದ್ಯ

ವಿಶ್ವಕಪ್ ನ ಅಭ್ಯಾಸ ಪಂದ್ಯಗಳು ಈಗಾಗಲೇ ಆರಂಭವಾಗಿದ್ದು, ಇಂದು ಬಲಿಷ್ಠ ತಂಡಗಳಾದ ಭಾರತ ಮತ್ತು ಇಂಗ್ಲೆಂಡ್ ನಡುವೆ ಪೈಪೋಟಿ ನಡೆಯಲಿದೆ. ಕಳೆದ ಬಾರಿ ವಿಶ್ವ ಕಪ್ ಕಿರೀಟ ಅಲಂಕರಿಸಿದ್ದ ಇಂಗ್ಲೆಂಡ್ ಈ ಬಾರಿ ಇನ್ನಷ್ಟು ಬಲಿಷ್ಠವಾಗಿದೆ. ಆಲ್ ರೌಂಡರ್ ಗಳು ತುಂಬಿರುವ ಈ ತಂಡದ ಎದುರು ಭಾರತ ಯಾವ ರೀತಿ ಪ್ರದರ್ಶನ ತೋರಲಿದೆ ಎಂಬುದು ಇಂದು ತಿಳಿಯಲಿದೆ.

ಭಾರತ ತಂಡದಲ್ಲಿ ಗಿಲ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಭರ್ಜರಿ ಫಾರ್ಮ್ ನಲ್ಲಿದ್ದು, ಭಾರತದ ತಂಡದ ಬಲ ಇನ್ನಷ್ಟು ಹೆಚ್ಚಿಸಿದಂತಾಗಿದೆ. ವಿಶ್ವ ಕಪ್ ನಲ್ಲಿ ಭಾರತ ತಂಡದ 11ರ ಬಳಗದಲ್ಲಿ ಯಾರನ್ನು ಕಣಕ್ಕಿಳಿಸಲಿದ್ದಾರೆ ಎಂಬುದೇ ಗೊಂದಲವಾಗಿದೆ. ಭಾರತ ವಿಶ್ವಕಪ್ ಗೆದ್ದು 12 ವರ್ಷಗಳಾಗಿದ್ದು, ಈ ಬಾರಿ ಮತ್ತೊಮ್ಮೆ ಟ್ರೋಪಿ ಎತ್ತಿ ಹಿಡಿಯಲಿ ಎಂಬುದು ಭಾರತದ ಅಭಿಮಾನಿಗಳ ಆಶಯವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read