`ಮುಖ್ಯಮಂತ್ರಿಗಳ ಪರಿಹಾರ ನಿಧಿ’ಗೆ ಅರ್ಜಿ ಸಲ್ಲಿಸುವವರ ಗಮನಕ್ಕೆ : ಈ ದಾಖಲೆಗಳ ಸಲ್ಲಿಕೆ ಕಡ್ಡಾಯ

ಬೆಂಗಳೂರು : ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವವರಿಗೆ ಮಹತ್ವದ ಮಾಹಿತಿ, ಅರ್ಜಿದಾರರು ಇನ್ಮುಂದೆ ಅರ್ಜಿ ಸಲ್ಲಿಸುವಾಗ ಸೂಕ್ತ ದಾಖಲೆಗಳನ್ನು ಒದಗಿಸುವಂತೆ ಸೂಚನೆ ನೀಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಪರಿಹಾರ ಕೋರಿ ಸಚಿವರು, ವಿಧಾನ ಸಭಾ, ವಿಧಾನ ಪರಿಷತ್ ಸದಸ್ಯರು ಹಾಗೂ ಲೋಕಸಭಾ ಸದಸ್ಯರುಗಳ ಕಛೇರಿಗಳಿಂದ ಸಲ್ಲಿಕೆಯಾಗುತ್ತಿರುವ ಬಹುತೇಕ ಅರ್ಜಿಗಳು ಸಮರ್ಪಕವಲ್ಲದ ದಾಖಲಾತಿಗಳೊಂದಿಗೆ ಸಲ್ಲಿಕೆಯಾಗುತ್ತಿರುವೆ. ಇದರಿಂದಾಗಿ ಶೀಘ್ರಗತಿಯಲ್ಲಿ ಕಡತ ವಿಲೇವಾರಿ ಮಾಡಲು ತೊಂದರೆಯಾಗುತ್ತಿದ್ದು, ಬಡವರು, ನಿರ್ಗತಿಕರು ಹಾಗೂ ನೊಂದ ಜನರಿಗೆ ಸಕಾಲದಲ್ಲಿ ಪರಿಹಾರ ನೀಡಲು ವಿಳಂಬವಾಗುತ್ತಿರುವುದರಿಂದ, ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಮುಖ್ಯ ಉದ್ದೇಶ ಈಡೇರಿದಂತಾಗುವುದಿಲ್ಲ. ಆದುದರಿಂದ ಇನ್ನು ಮುಂದೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಈ ಕೆಳಕಂಡ ದಾಖಲಾತಿಗಳನ್ನು ಸಲ್ಲಿಸುವಂತೆ ಈ ಮೂಲಕ ತಿಳಿಸಲಾಗಿದೆ.

ಅರ್ಜಿದಾರರು ಕಡ್ಡಾಯವಾಗಿ ಈ ದಾಖಲೆಗಳನ್ನು ಸಲ್ಲಿಸಬೇಕು

ಅರ್ಜಿದಾರರ ಭಾವ ಚಿತ್ರ (ಪಾಸ್ ಪೋರ್ಟ್ ಅಳತ)

ಆರ್ಜಿದಾರರ ಬಿ.ಪಿ.ಎಲ್‌ ಪಡಿತರ ಚೀಟಿ (BIL Card)

ಅರ್ಜಿದಾರರ ಆಧಾರ್ ಗುರುತಿನ ಚೀಟಿ (ಆರ್ಜಿದಾರರ ಬ್ಯಾಂಕ್‌ ಖಾತೆಯು ಆಧಾರ್ ಗುರುತಿನ ಚೀಟಿ ಸಂಖ್ಯೆಯೊಂದಿಗೆ ಜೋಡಣೆ  ಆಗಿರಬೇಕು.

ಅರ್ಜಿದಾರರು ಚಿಕಿತ್ಸೆ ಪಡೆದಿರುವ ಆಸ್ಪತ್ರೆಯ ಸೀಲು ಸಹಿ ಇರುವ ಅಂತಿಮ ಮೂಲ ಬಿಲ್ಲುಗಳು (Hospital Final Bill)

ಆಸ್ಪತ್ರೆಯ ಬಿಡುಗಡೆ ಸಾರಾಂಶ ಪತ್ರದ ಪ್ರತಿ (Discharge summary )

ಅರ್ಜಿದಾರರು ಚಿಕಿತ್ಸೆ ಪಡೆಯಬೇಕಾದಲ್ಲಿ ಆಸ್ಪತ್ರೆಯ ಚಿಕಿತ್ಸಾ ವೆಚ್ಚದ ಮೂಲ ಅಂದಾಜು ಪಟ್ಟಿ (Hospital Estimate)

ಅರ್ಜಿದಾರರು ಬ್ಯಾಂಕ್ ಖಾತೆ ಹೊಂದಿರಬೇಕು, ಸದರಿ ಪಾತೆಯ ಪಾಸ್ ಪುಸ್ತಕದ ಮೊದಲ ಪ್ರತಿ (Bank Pass Book / Extract) ಬ್ಯಾಂಕ್ ಖಾತ NPCI ಗೆ ಮ್ಯಾನ್ ಆಗಿರಬೇಕು,

ಅರ್ಜಿದಾರರ ಅಥವಾ ಅವರ ಕುಟುಂಬ ವರ್ಗದವರ ಬಳಕೆಯಲ್ಲಿರುವ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಬೇಕು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read